ಇದು ಮಳೆಗಾಲ… ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ಟ್ರೆಕ್ಕಿಂಗ್ ಹೋಗೋದಕ್ಕೆ ಪರ್ಫೆಕ್ಟ್ ಸೀಸನ್. ಆದರೆ ಮಳೆಗಾಲದ ಟ್ರೆಕ್ ಅಂದ್ರೆ ಸೌಂದರ್ಯವಷ್ಟೇ ಅಲ್ಲ, ಕೆಲವೊಂದು ಸವಾಲುಗಳು ಬರೋದು ಪಕ್ಕಾ. ಸುರಕ್ಷಿತವಾಗಿ ಟ್ರೆಕ್ ಮಾಡಲು ಕೆಲವೊಂದು ಸುಲಭವಾದ, ಆದರೆ ಬಹುಮುಖ್ಯ ಟಿಪ್ಸ್‌ಗಳನ್ನು ಪಾಲಿಸಿದರೆ, ನಿಮ್ಮ ಅನುಭವ ಇನ್ನೂ ಚೆನ್ನಾಗಿರಬಹುದು.
ಹವಾಮಾನ ತಪಾಸಣೆ
ಟ್ರೆಕ್ಕಿಂಗ್ ಹೋಗೋದಕ್ಕೆ ಮುಂಚೆ ಹವಾಮಾನ ಮುನ್ಸೂಚನೆ ಚೆಕ್ ಮಾಡುವುದು ತುಂಬಾ ಅವಶ್ಯಕ. ಆಕಸ್ಮಿಕವಾಗಿ ಭಾರಿ ಮಳೆ ಅಥವಾ ಭೂಕುಸಿತದ ಅಪಾಯವಿದ್ದರೆ ತಕ್ಷಣ ಪ್ಲ್ಯಾನ್‌ನ್ನು ಬದಲಾಯಿಸೋದು ಒಳ್ಳೆಯದು.
ಶೂ ಮತ್ತು ಡ್ರೆಸ್ಸಿಂಗ್ ಸರಿಯಾಗಿರಲಿ
ನೀರಿನಲ್ಲಿ ಜಾರದ ಶೂ, ಗ್ರಿಪ್ ಇರುವ ಟ್ರೆಕಿಂಗ್ ಬೂಟ್ಸ್ ಹಾಕಿ. ವಾಟರ್‌ಪ್ರೂಫ್ ಜಾಕೆಟ್, ಕ್ಯಾಪ್ ಹಾಗೂ ಲೇಯರ್ ಮಾಡಿದ ಉಡುಗೆಗಳು ನಿಸರ್ಗದ ಬದಲಾವಣೆಗಳಿಗೆ ನಿಮ್ಮನ್ನು ತಯಾರಾಗಿರಿಸುತ್ತವೆ.
ಎಸೆನ್ಷಿಯಲ್ ಬಾಕ್ಸ್ ಜೊತೆಗೆ ಇಟ್ಟುಕೊಳ್ಳಿ
ಹೈಡ್ರಷನ್ ಪ್ಯಾಕ್, ಫಸ್ಟ್ ಏಡ್ ಕಿಟ್, ಟಾರ್ಚ್ (ಅಥವಾ ಹೆಡ್ ಲ್ಯಾಂಪ್), ಪ್ಲಾಸ್ಟಿಕ್ ಬ್ಯಾಗ್, ಡ್ರೈ ಫುಡ್ ಮತ್ತು ಪವರ್ ಬ್ಯಾಂಕ್ ಇತ್ಯಾದಿಗಳನ್ನು ಇಟ್ಟುಕೊಳ್ಳಿ.
ಗುಂಪಿನಲ್ಲಿ ಟ್ರೆಕ್ ಮಾಡಿ
ಮಳೆಗಾಲದಲ್ಲಿ ಸೊಲೋ ಟ್ರೆಕ್ಕಿಂಗ್ ಹೋಗೋದು ಅಪಾಯ. ಗುಂಪಿನಲ್ಲಿ ಟ್ರೆಕ್ ಮಾಡಿದ್ರೆ ಸಹಾಯ ಮಾಡಲು ಯಾರಾದರೂ ಇರುತ್ತಾರೆ, ದಾರಿ ತಪ್ಪಿದ್ರು ಸಹಜವಾಗಿ ಹುಡುಕೋದು ಸುಲಭ.
ಅಪಾಯಕಾರಿಯಾದ ಭಾಗಗಳಿಂದ ದೂರವಿರಿ
ಜಾರುವ ಬಂಡೆಗಳು, ನದಿಯ ಅತಿಕ್ರಮಿತ ಪ್ರದೇಶಗಳು, ಭೂಕುಸಿತದ ಭಾಗಗಳಿಂದ ದೂರವಿರಿ.
ಮಳೆಗಾಲದ ಟ್ರೆಕ್ ಸೂಪರ್ ಎಕ್ಸ್‌ಪೀರಿಯನ್ಸ್ ಆಗಿರಬಹುದು. ಆದರೆ ಸಿಕ್ಕಾಪಟ್ಟೆ ತಯಾರಿ ಬೇಕು. ಮುಂಚಿತ ಪ್ಲ್ಯಾನಿಂಗ್, ಹವಾಮಾನ ಮಾಹಿತಿ – ಇವನ್ನೆಲ್ಲಾ ಫಾಲೋ ಮಾಡಿದ್ರೆ, ನಿಮ್ಮ ಟ್ರೆಕ್ ಸ್ಮರಣೀಯವಾಗೋದು ಖಚಿತ!