ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬ ಬಂದೇಬಿಡ್ತು, ಕೆಲವೇ ದಿನಗಳು ಬಾಕಿ ಇರುವಾಗಲೇ ಎಲ್ಲೆಲ್ಲೂ ಪಟಾಕಿ ಶಬ್ದ ಜೋರಾಗೆ ಇದೆ. ದೀಪದ ಬೆಳಕು ಹಬ್ಬಕ್ಕೆ ಮತ್ತಷ್ಟು ಕಳೆಯನ್ನು ತರುತ್ತದೆ. ಈ ನಡುವೆ ಪಟಾಕಿ ಸಿಡಿಸುವವರಿಗೇನೂ ಕಮ್ಮಿಯಿಲ್ಲ. ಪಟಾಕಿ ಸಿಡಿಸಿ ಆದರೆ ಜಾಗ್ರತೆಯಿರಲಿ.
- ಪಟಾಕಿ ಹೊಡೆಯುವ ಮೊದಲು ಒಂದು ಬಕೆಟ್ ನೀರನ್ನು ಜೊತೆಯಲ್ಲಿರಿಸಿ. ಬೆಂಕಿ ಹರಡಿದಾಗ ಅದನ್ನು ನಂದಿಸಲು ನೀರು ಬೇಕಾಗುತ್ತದೆ.
- ಸುಡುವ ವಸ್ತುಗಳಿಂದ ದೂರವಿರುವ ತೆರೆದ ಪ್ರದೇಶವನ್ನು ಆರಿಸಿ.
- ಮಕ್ಕಳನ್ನು ಪಟಾಕಿ ಹೊಡೆಯುವಾಗ ದೂರ ಇಡಬೇಕು.
- ನಾವು ಸುಡುವ ಪಟಾಕಿಗಳನ್ನು ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲಾಗುತ್ತದೆ ಎಂದು ನೋಡಿಕೊಳ್ಳಿ.
- ಧರಿಸುವ ಬಟ್ಟೆಯ ಬಗ್ಗೆ ಎಚ್ಚರಿಕೆ ವಹಿಸಬೇಕು.
- ಪಟಾಕಿ ಕಣ್ಣಿಗೆ ಸಿಡಿಯದಂತೆ ಕನ್ನಡಕ ಧರಿಸಿ.
- ದೊಡ್ಡ ಪಟಾಕಿ ಸಿಡಿಸುವಾಗ ಮಕ್ಕಳ ಹಿಂದೆ ದೊಡ್ಡವರು ಇರುವುದು ಉತ್ತಮ. ವಯಸ್ಕರು ಅವರಿಗೆ ಅಗತ್ಯವಿರುವ ಸಹಾಯವನ್ನು ಒದಗಿಸಬೇಕು.
- ಯಾವುದೇ ಗಾಯಗಳಾದರೆ ತಕ್ಷಣ ಹತ್ತಿರದ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಿರಿ.
- ಪಟಾಕಿಗಳನ್ನು ಗುಣಮಟ್ಟದ, ಪರವಾನಗಿ ಹೊಂದಿರುವ ಮಳಿಗೆಗಳಿಂದ ಮಾತ್ರ ಖರೀದಿಸಬೇಕು.
- ಗಾಳಿ ಬೀಸುತ್ತಿರುವಾಗ ಪಟಾಕಿ ಸುಡುವುದು ಒಳ್ಳೆಯದಲ್ಲ.