LIFE STYLE| ಮದುವೆ ಬಳಿಕ ಜೀವನ ಖುಷಿಯಾಗಿರಬೇಕೆಂದರೆ ಈ ಸಲಹೆಗಳನ್ನು ಅನುಸರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಒಂದು ಪವಿತ್ರ ಬಂಧ. ಸಪ್ತಪದಿ ತುಳಿದು ನಿಮ್ಮ ಬದುಕಿಗೆ ಬಂದ ಮೇಲೆ ಆ ಹುಡುಗಿಯ ಎಲ್ಲ ಜವಾಬ್ದಾರಿ ನೀವೇ ಆಗಿರುತ್ತೀರಿ. ಇಬ್ಬರ ನಡುವೆ ಉತ್ತಮ ಹೊಂದಾಣಿಕೆಯಿದ್ದರೆ, ಜೀವನವು ಸುಗಮವಾಗಿ ಮುಂದುವರಿಯುತ್ತದೆ. ದಂಪತಿ ನಡುವೆ ಪ್ರೀತಿ, ಹೊಂದಾಣಿಕೆ, ತಿಳುವಳಿಕೆ, ಗೌರವ ಮತ್ತು ಆರೋಗ್ಯಕರ ಸಂಬಂಧ ಇರಬೇಕು. ಇದಕ್ಕಿಂತ ಕಡಿಮೆ ಏನಿದ್ದರೂ ಸಂಬಂಧ ಹಾಳಾಗುತ್ತದೆ. ಅದಕ್ಕಾಗಿಯೇ ಆರೋಗ್ಯಕರ ವೈವಾಹಿಕ ಜೀವನವನ್ನು ಆನಂದಿಸಲು ಕೆಲವು ವಿಷಯಗಳನ್ನು ಅನುಸರಿಸಬೇಕು, ವಿಶೇಷವಾಗಿ ಪುರುಷರು..

  • ಪತ್ನಿ ಕಷ್ಟಪಡುತ್ತಿದ್ದರೆ, ಗಂಡ ಬೆನ್ನೆಲುಬಾಗಬೇಕು. ಯಾವುದೇ ಸಂದರ್ಭದಲ್ಲಿ ಆಕೆಯ ಕೈಯನ್ನು ಬಿಡಬೇಡಿ.
  • ಬೇಜಾರಲ್ಲಿದ್ದಾಗ ಸಂಗಾಂತಿಯ ಸಾಂತ್ವನವೇ ಮದ್ದು. ನಿಮ್ಮ ಸಾಂತ್ವನ ನೋವನ್ನು ಮರೆಯುವ ಹಾಗೆ ಇರಬೇಕು.
  • ಇದು ತಪ್ಪು ಎಂದು ನೀವು ಭಾವಿಸಿದಾಗ, ಒಬ್ಬರಿಗೊಬ್ಬರು ಕುಳಿತು ಮಾತನಾಡಿ. ಹೇಳಲು ಪ್ರಯತ್ನಿಸಿ. ಮನವರಿಕೆ ಮಾಡಿಕೊಡಿ, ಅದು ಬಿಟ್ಟು ಏಕಾಏಕಿ ಜಗಳ ಒಳ್ಳೆಯದಲ್ಲ..
  • ಸಂತೋಷದ ದಾಂಪತ್ಯ ಸಂಬಂಧ ಬೇಕೆಂದರೆ ನಿಮ್ಮ ಸಂಗಾತಿ ಸಂತೋಷವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
  • ಸರ್ಪ್ರೈಸ್ ಕೊಟ್ಟು ಖುಷಿ ಪಡಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ, ಕಷ್ಟವಾದರೂ ನಿಮ್ಮ ಬದುಕಲ್ಲಿ ಸಂತೋಷ ತರುತ್ತದೆ.
  • ನಾವು ಮಾಡುವ ಕೆಲಸಗಳಿಂದ ನಮ್ಮ ಸಂಗಾತಿಗೆ ನೋವಾಗದಂತೆ, ತೊಂದರೆಯಾಗದಂತೆ ನೋಡಿಕೊಳ್ಳಿ.
  • ಮನೆ ಕೆಲಸ/ಕಚೇರಿ ಕೆಲಸದಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಿ, ಕೆಲಸದಿಂದ ಬಂದ ಬಳಿಕ ಉಪಚರಿಸುವುದು ಬಹಳ ಮುಖ್ಯ.
  • ಮಕ್ಕಳ ಬಗೆಗೆ ಸದಾ ಪಾಸಿಟಿವ್‌ ಆಗಿರಿ, ಇಬ್ಬರ ಕಾಳಜಿಯೂ ಇಲ್ಲಿ ಅವಶ್ಯಕವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!