Saturday, November 1, 2025

FOOD | ವಿಭಿನ್ನ ರೀತಿಯ ಕ್ರಿಸ್ಪಿ ಕಾರ್ನ್ ಪಕೋಡಾ! ಸಂಜೆ ಟೀ ಜೊತೆ ಸವಿಯಿರಿ

ಸಂಜೆ ಚಹಾ ಜೊತೆ ಏನಾದರೂ ಸ್ಪೆಷಲ್ ತಿಂಡಿಯನ್ನು ತಿನ್ನೋ ಹಂಬಲ ಎಲ್ಲರಿಗೂ ಇರುತ್ತದೆ. ಬೇಗ ತಯಾರಾಗೋ ಮತ್ತು ಎಲ್ಲರಿಗೂ ಇಷ್ಟವಾಗೋ ತಿಂಡಿ ಕಾರ್ನ್ ಪಕೋಡಾ! ಕ್ರಿಸ್ಪಿ, ಸ್ಪೈಸಿ ಮತ್ತು ಸಿಹಿ ರುಚಿಯ ಸಂಯೋಜನೆಯಿಂದ ಈ ತಿಂಡಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟವಾಗುತ್ತೆ.

ಬೇಕಾಗುವ ಸಾಮಗ್ರಿಗಳು:

ಕಾರ್ನ್‌ – 1 ಕಪ್ (ಬೇಯಿಸಿದ)
ಈರುಳ್ಳಿ – 1
ಬೆಳ್ಳುಳ್ಳಿ – 4-5 ಕಾಳು
ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಅರಿಶಿಣ – ¼ ಟೀಸ್ಪೂನ್
ಕೆಂಪು ಖಾರದ ಪುಡಿ – 1 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಇಂಗು – ಸ್ವಲ್ಪ
ಗರಂ ಮಸಾಲಾ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕಡಲೆ ಹಿಟ್ಟು/ಬಜ್ಜಿ ಹಿಟ್ಟು – 3 ಟೇಬಲ್ ಸ್ಪೂನ್
ಅಕ್ಕಿ ಹಿಟ್ಟು – 1 ಟೇಬಲ್ ಸ್ಪೂನ್
ಎಣ್ಣೆ – ಕರಿಯಲು ಅಗತ್ಯವಷ್ಟು

ಮಾಡುವ ವಿಧಾನ:

ಒಂದು ದೊಡ್ಡ ಬೌಲ್‌ನಲ್ಲಿ ಬೇಯಿಸಿದ ಕಾರ್ನ್ ಹಾಕಿ. ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಕರಿಬೇವು, ಅರಿಶಿಣ, ಖಾರ ಪುಡಿ, ಧನಿಯಾ ಪುಡಿ, ಇಂಗು, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ನಂತರ ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟು ಸೇರಿಸಿ ಬಜ್ಜಿ ಮಾಡುವ ಹದಕ್ಕೆ ನೀರು ಹಾಕಿ ಮಿಶ್ರಣ ತಯಾರಿಸಿ. ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿ ಮಾಡಿ, ಚಿಕ್ಕ ಚಿಕ್ಕ ಉಂಡೆಗಳಂತೆ ಹಾಕಿ ಬಣ್ಣ ಬದಲಾಗುವ ತನಕ ಕರಿಯಿರಿ.

error: Content is protected !!