Tuesday, September 23, 2025

FOOD | ಉತ್ತರ ಕರ್ನಾಟಕದ ವಿಶೇಷ ಖಾದ್ಯ ಜೋಳದ ತಾಲಿಪಟ್ಟು! ರೆಸಿಪಿ ಇಲ್ಲಿದೆ ನೋಡಿ!

ದಸರಾ ಹಬ್ಬ ಬಂತೆಂದರೆ ಮನೆಮಾತಾಗುವಂತಹ ಅಡುಗೆಗಳ ಸವಿ ಎಲ್ಲರ ಮನಗೂ ಹತ್ತಿರವಾಗಿರುತ್ತದೆ. ವಿಶೇಷವಾಗಿ ಉತ್ತರ ಕರ್ನಾಟಕದವರು ಖಾರಪ್ರಿಯರು. ಹಬ್ಬದ ಸಂಭ್ರಮದಲ್ಲಿ “ಜೋಳದ ತಾಲಿಪಟ್ಟು” ತಯಾರಿಸುವುದು ಅವರಿಗೊಂದು ಸಂಪ್ರದಾಯ. ರುಚಿಕರವಾಗಿಯೂ ಆರೋಗ್ಯಕರವಾಗಿಯೂ ಇರುವ ಈ ತಿನಿಸು ಬೆಳಗಿನ ಉಪಾಹಾರಕ್ಕೂ, ಸಂಜೆ ತಿಂಡಿಗೂ ಸೂಕ್ತ. ಹಾಗಾದರೆ ಇವತ್ತು ಈ ತಾಲಿಪಟ್ಟು ಹೇಗೆ ಮಾಡುವುದು ಎಂಬುದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು:

ಜೋಳದ ಹಿಟ್ಟು – 1 ಕಪ್
ಗೋಧಿ ಹಿಟ್ಟು – 50 ಗ್ರಾಂ
ಕಡಲೆ ಹಿಟ್ಟು – 50 ಗ್ರಾಂ
ಜೀರಿಗೆ – ಸ್ವಲ್ಪ
ಅರಶಿನ – ಚಿಟಿಕೆ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಬೇಕಾದಷ್ಟು
ಹಸಿಮೆಣಸಿನ ಕಾಯಿ (ಹೆಚ್ಚಿದದ್ದು) – 3
ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು
ಈರುಳ್ಳಿ (ಹೆಚ್ಚಿದದ್ದು) – 1
ಕ್ಯಾರೆಟ್ (ಹೆಚ್ಚಿದದ್ದು) – 1
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಬೇಕಾದಷ್ಟು

ಮಾಡುವ ವಿಧಾನ:

ಮೊದಲು ಒಂದು ದೊಡ್ಡ ಪಾತ್ರೆಗೆ ಎಲ್ಲಾ ಹಿಟ್ಟುಗಳನ್ನು ಹಾಕಿ. ಅದಕ್ಕೆ ಜೀರಿಗೆ, ಅರಶಿನ, ಉಪ್ಪು, ಹಸಿಮೆಣಸಿನ ಕಾಯಿ, ಖಾರದ ಪುಡಿ, ಈರುಳ್ಳಿ, ಕ್ಯಾರೆಟ್, ಕರಿಬೇವು ಮತ್ತು ಕೊತ್ತಂಬರಿ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ಈಗ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಚಪಾತಿ ಹಿಟ್ಟಿನಂತೆ ಮೃದುವಾದ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ. ನಂತರ ಹಿಟ್ಟನ್ನು ಹತ್ತು ನಿಮಿಷ ಹಾಗೆಯೇ ಬಿಡಿ.

ನಂತರ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ, ಬಾಳೆ ಎಲೆಯ ಮೇಲೆ ಎಣ್ಣೆ ಹಚ್ಚಿ, ಅದರ ಮೇಲೆ ಉಂಡೆಯನ್ನು ಇಟ್ಟು ರೊಟ್ಟಿಯಂತೆ ತಟ್ಟಿಕೊಳ್ಳಿ. ಈಗ ಕಾವಲಿ ಬಿಸಿ ಮಾಡಿ, ತಟ್ಟಿದ ತಾಲಿಪಟ್ಟನ್ನು ನಿಧಾನವಾಗಿ ಕಾವಲಿಗೆ ಹಾಕಿ. ಎರಡೂ ಬದಿಗಳು ಬಂಗಾರದ ಬಣ್ಣ ಬರುವವರೆಗೆ ಎಣ್ಣೆ ಹಚ್ಚಿ ಬೇಯಿಸಿದರೆ ರುಚಿಕರವಾದ ಜೋಳದ ತಾಲಿಪಟ್ಟು ಸಿದ್ಧ.

ಇದನ್ನೂ ಓದಿ