ಆಹಾರದಲ್ಲಿ ನಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುವ ಹಲವು ಆಹಾರ ಪದಾರ್ಥಗಳಿವೆ. ಇವೆಲ್ಲದರಲ್ಲಿಯೂ ಬಾದಾಮಿ ಮತ್ತು ಬ್ರೊಕೊಲಿ ವಿಶೇಷ ಸ್ಥಾನ ಪಡೆಯುತ್ತವೆ. ಈ ಎರಡೂ ಆಹಾರ ಪದಾರ್ಥಗಳಲ್ಲಿ ಶಕ್ತಿ ತುಂಬುವ ಗುಣಗಳು ಮಾತ್ರವಲ್ಲದೆ, ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವ ಶಕ್ತಿಯೂ ಇದೆ.
ಬೇಕಾಗುವ ಸಾಮಗ್ರಿಗಳು:
ಬ್ರೊಕೊಲಿ ಹೂವು: 1 ಕಪ್
ಬಾದಾಮಿ: 40 ಗ್ರಾಂ (ನೆನೆಸಿದ್ದು)
ಹಾಲಿನ ಕೆನೆ: 1/2 ಕಪ್
ಉಪ್ಪು: ಸ್ವಾದಕ್ಕನುಗುಣವಾಗಿ
ಕರಿಮೆಣಸು ಪುಡಿ: ಸ್ವಲ್ಪ
ಬಾದಾಮಿ ತುಂಡುಗಳು: ಸರ್ವ್ ಮಾಡಲು
ಮಾಡುವ ವಿಧಾನ:
ಬ್ರೊಕೊಲಿ ಹೂವುಗಳನ್ನು 6-8 ನಿಮಿಷ ಬೇಯಿಸಿ. ಈಗ ಬೇಯಿಸಿದ ಬ್ರೊಕೊಲಿಯನ್ನು ಬ್ಲೆಂಡರ್‌ನಲ್ಲಿ ಹಾಕಿ, ನೆನೆಸಿದ ಬಾದಾಮಿ ಮತ್ತು ಹಾಲಿನ ಕೆನೆ ಸೇರಿಸಿ ಪೇಸ್ಟ್ ಮಾಡಿ.
ಉಪ್ಪು ಮತ್ತು ಕರಿಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪ್ಯಾನ್ ನಲ್ಲಿ ಈ ಮಿಶ್ರಣವನ್ನು ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ 3-5 ನಿಮಿಷ ಬೇಯಿಸಿದರೆ ಸಾಕು ಬಿಸಿ ಬಿಸಿ ಬಾದಾಮಿ-ಬ್ರೊಕೊಲಿ ಸೂಪ್ ಸವಿಯಲು ಸಿದ್ಧ.