ಮಶ್ರೂಮ್ ಎಂದರೆ ಬಹುತೆಕ ಜನರ ಮನಸ್ಸಿನಲ್ಲಿ ಬಿರಿಯಾನಿ, ಗ್ರೇವಿ ಅಥವಾ ಮಸಾಲಾ ಅನ್ನೋದೇ ತಕ್ಷಣ ಫ್ಲ್ಯಾಶ್ ಆಗುತ್ತೆ. ಆದರೆ ಮಶ್ರೂಮ್‌ನಿಂದ ತಯಾರಿಸಬಹುದಾದ ಚಟ್ನಿಯೊಂದಿದೆ ಎಂದು ನಿಮಗೆ ಗೊತ್ತಾ? ಈ ಚಟ್ನಿ ದೋಸೆ, ಇಡ್ಲಿ, ರೊಟ್ಟಿಗೆ ಅದ್ಭುತ ಕಾಂಬಿನೇಶನ್.
ಬೇಕಾಗುವ ಪದಾರ್ಥಗಳು:
ಮಶ್ರೂಮ್
ಈರುಳ್ಳಿ
ಒಣ ಮೆಣಸು
ಎಣ್ಣೆ
ಬೆಳ್ಳುಳ್ಳಿ
ಶುಂಠಿ
ಹುಣಸೆ ಹಣ್ಣು
ಉಪ್ಪು
ತೆಂಗಿನಕಾಯಿ
ಸಾಸಿವೆ
ಕಡಲೆ ಹಿಟ್ಟು
ಅರಿಶಿಣ
ಕರಿಬೇವು
ಮಾಡುವ ವಿಧಾನ:
ಮೊದಲಿಗೆ ಮಶ್ರೂಮ್‌ಗಳನ್ನು ಚೆನ್ನಾಗಿ ತೊಳೆದು, ಸಣ್ಣಗೆ ಕತ್ತರಿಸಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಣ ಮೆಣಸು, ಈರುಳ್ಳಿ ಹಾಕಿ ಬಾಡಿಸಬೇಕು. ಬಾಡಿದ ನಂತರ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಹಾಗೂ ಸ್ವಲ್ಪ ಹುಣಸೆಹುಳಿ ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಬೇಕು. ಇದರ ಮಧ್ಯೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣವಾಗುವವರೆಗೆ ಬೇಯಿಸಬೇಕು.
ಈ ಎಲ್ಲ ಮಿಶ್ರಣ ತಣ್ಣಗಾದ ನಂತರ ಮಿಕ್ಸರ್ ಜಾರ್‌ಗೆ ಹಾಕಿ, ತೆಂಗಿನಕಾಯಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಈಗ ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕರಿಬೇವು, ಅರಿಶಿಣ ಪುಡಿ ಹಾಗೂ ಸ್ವಲ್ಪ ಕಡಲೆಹಿಟ್ಟು ಹಾಕಿ ಚೆನ್ನಾಗಿ ಹುರಿದು, ಈ ಮಿಶ್ರಣವನ್ನು ರುಬ್ಬಿದ ಚಟ್ನಿಗೆ ಸೇರಿಸಿ ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಶ್ರೂಮ್ ಚಟ್ನಿ ರೆಡಿ.