March 2, 2026
Monday, March 2, 2026
spot_img

FOOD | ಅಂಜಲ್ ಫ್ರೈ: ಕುಡ್ಲದ ರುಚಿ ಈಗ ನಿಮ್ಮ ಅಡುಗೆಮನೆಯಲ್ಲೇ, ತಿನ್ನೋಕೆ ರೆಡಿನಾ?

ದಕ್ಷಿಣ ಭಾರತದ ಕರಾವಳಿ ಶೈಲಿಯಲ್ಲಿ ತಯಾರಿಸುವ ಈ ಅಂಜಲ್ ಮೀನು ಫ್ರೈ, ಊಟದ ತಟ್ಟೆಗೆ ವಿಶೇಷ ರುಚಿ ಕೊಡೋದು ನಿಜ. ಸರಳ ಮಸಾಲೆ, ಸ್ವಲ್ಪ ಮೆರಿನೇಷನ್ ಸಮಯ ಮತ್ತು ಸರಿಯಾದ ಹುರಿಯುವ ವಿಧಾನ ಇಷ್ಟೇ ಸಾಕು, ಹೋಟೆಲ್‌ ಸ್ಟೈಲ್ ರುಚಿಯನ್ನು ಮನೆಯಲ್ಲೇ ಸವಿಯಬಹುದು.

ಬೇಕಾಗುವ ಪದಾರ್ಥಗಳು:

ಅಂಜಲ್ ಮೀನು ತುಂಡುಗಳು – 4–6
ಕೆಂಪು ಮೆಣಸಿನ ಪುಡಿ – 1½ ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಲಿಂಬೆ ರಸ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅಕ್ಕಿ ಹಿಟ್ಟು ಅಥವಾ ರವೆ – 1 ಟೇಬಲ್ ಸ್ಪೂನ್
ಎಣ್ಣೆ – ಹುರಿಯಲು

ತಯಾರಿಸುವ ವಿಧಾನ:

ಮೊದಲು ಮೀನು ತುಂಡುಗಳನ್ನು ಚೆನ್ನಾಗಿ ತೊಳೆದು ನೀರು ನೀರು ತೆಗೆದಿಡಿ.

ಒಂದು ಬಟ್ಟಲಿನಲ್ಲಿ ಮೆಣಸಿನ ಪುಡಿ, ಅರಿಶಿನ, ಧನಿಯಾ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಲಿಂಬೆ ರಸ ಹಾಕಿ ಮಿಶ್ರಣ ತಯಾರಿಸಿ.

ಈ ಮಸಾಲೆಯನ್ನು ಮೀನು ತುಂಡುಗಳಿಗೆ ಸಮವಾಗಿ ಲೇಪಿಸಿ 20–30 ನಿಮಿಷ ಮೆರಿನೇಟ್ ಮಾಡಿ. ನಂತರ ಬೇಕಿದ್ದರೆ ರವೆಯಲ್ಲಿ ಮುಳುಗಿಸಿ.

ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಎರಡೂ ಬದಿಗಳನ್ನೂ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !