April 21, 2026
Tuesday, April 21, 2026
spot_img

ಕೊನೆಯಾಯಿತು 13 ವರ್ಷಗಳ ಜೀವನ್ಮರಣ ಹೋರಾಟ: ದಯಾಮರಣ ಹೊಂದಿದ ಹರೀಶ್ ರಾಣಾ ವಿಧಿವಶ

ಕಳೆದ 13 ವರ್ಷಗಳಿಂದ ಸಾವು ಬದುಕಿನ ನಡುವಿನ ಹೋರಾಟ ನಡೆಸುತ್ತಿದ್ದ 32 ವರ್ಷದ ಹರೀಶ್ ರಾಣಾ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರಿಗೆ ನೀಡಲಾಗುತ್ತಿದ್ದ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲು ಸೂಚಿಸಿತ್ತು. ಈ ಮೂಲಕ ದಯಾಮರಣಕ್ಕೆ ಅನುಮತಿ ನೀಡಿತ್ತು.

ಈ ಹಿನ್ನೆಲೆ ಏಮ್ಸ್‌ ಆಸ್ಪತ್ರೆಯಲ್ಲಿ ದಯಾಮರಣ ಪ್ರಕ್ರಿಯೆಯು ಪ್ರಾರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಆಹಾರ ಪೂರೈಕೆಯನ್ನು ನಿಲ್ಲಿಸಲಾಯಿತು. ಎರಡನೇ ಹಂತದಲ್ಲಿ ನೀರನ್ನು ನಿಲ್ಲಿಸಲಾಯಿತು . ಈ ಮೂಲಕ ದಯಾಮರಣಗೊಳಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಇಂದು ಅವರು ಇಹಲೋಕ ತ್ಯಜಿಸಿದ್ದಾರೆ.

2013 ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಹರೀಶ್ ರಾಣಾ ಅವರು ಅಂದಿನಿಂದ ಕೋಮಾದಲ್ಲಿದ್ದರು.

ಮಗನಲ್ಲಿ ಯಾವುದೇ ಚೇತರಿಕೆ ಕಾಣದ ಪೋಷಕರು ಆತನಿಗೆ ದಯಾಮರಣ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಈ ಹಿನ್ನೆಲೆ ಕೋರ್ಟ್ ಅನುಮತಿ ನೀಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !