ಆಪಲ್-ಬಾದಾಮ್ ಐಸ್ ಕ್ರೀಮ್ ಸ್ವಾದಿಷ್ಟವೂ ಆಗಿದ್ದು, ಮಕ್ಕಳಿಂದ ಹಿಡಿದು ಎಲ್ಲರಿಗೂ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಈ ರೆಸಿಪಿಯಲ್ಲಿ ಆಪಲ್‌ನ ತಾಜಾ ರುಚಿ ಮತ್ತು ಬಾದಾಮಿನ ಪೋಷಕತತ್ವ ಸೇರಿಕೊಂಡಿದೆ.
ಬೇಕಾಗುವ ಪದಾರ್ಥಗಳು:
ಆಪಲ್ – 2 (ಸಣ್ಣ ತುಂಡುಗಳಾಗಿ ಕತ್ತರಿಸಿದ್ದು)
ಬಾದಾಮಿ – 10-12
ಹಾಲು – 2 ಕಪ್
ಸಕ್ಕರೆ – 1/2 ಕಪ್
ಫ್ರೆಶ್ ಕ್ರೀಮ್ – 1/2 ಕಪ್
ಏಲಕ್ಕಿ ಪುಡಿ – 1/4 ಟೀ ಸ್ಪೂನ್
ಮಾಡುವ ವಿಧಾನ:
ಮೊದಲಿಗೆ ಬಾದಾಮಿಯನ್ನು 4-5 ಗಂಟೆ ನೀರಿನಲ್ಲಿ ನೆನೆಸಿಸಿ, ನಂತರ ಅವುಗಳ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ.
ಈಗ ಆಪಲ್ ಅನ್ನು ಸಣ್ಣದಾಗಿ ಕತ್ತರಿಸಿ ಬಿಸಿ ಹಾಲಿನಲ್ಲಿ ಸ್ವಲ್ಪ ಬೇಯಿಸಿ. ನಂತರ ಇದನ್ನು ಮಿಕ್ಸಿ ಮಾಡಿ. ಈಗ ಒಂದು ಪ್ಯಾನ್‌ನಲ್ಲಿ ಹಾಲು ಹಾಕಿ ಕುದಿಸಿ, ಅದರಲ್ಲಿಗೆ ಬಾದಾಮ್ ಪೇಸ್ಟ್ ಮತ್ತು ಆಪಲ್ ಪೇಸ್ಟ್ ಹಾಕಿ ಮತ್ತೊಮ್ಮೆ ಚೆನ್ನಾಗಿ ಕುದಿಸಿ. ಇದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ, ಸಕ್ಕರೆ ಕರಗುವವರೆಗೂ ಮಿಕ್ಸ್ ಮಾಡಿ. ನಂತರ ಈ ಮಿಶ್ರಣಕ್ಕೆ ಫ್ರೆಶ್ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತಣ್ಣಗಾಗಲು ಬಿಡಿ.
ನಂತರ ಈ ಮಿಶ್ರಣವನ್ನು ಏರ್ ಟೈಟ್ ಡಬ್ಬಿಯಲ್ಲಿ ಹಾಕಿ ಫ್ರೀಜರ್‌ನಲ್ಲಿ 6-8 ಗಂಟೆಗಳ ಕಾಲ ತಣ್ಣಗಾಗಿಸಿದರೆ ಆಪಲ್ ಬಾದಾಮ್ ಐಸ್ ಕ್ರೀಮ್ ರೆಡಿ.