ಬಿಸಿ ಬಿಸಿ ಅನ್ನದಲ್ಲಿ ಬೆರಸಿದ ಸಿಹಿಯಾದ ಮೆತ್ತನೆಯ ಕಾರ್ನ್‌ಗಳು, ಕೇಳುವಾಗ್ಲೇ ಬಾಯಲ್ಲಿ ನೀರು ಬರ್ತಿದೆ ಅಲ್ವ? ಹಾಗಿದ್ರೆ ಒಮ್ಮೆ ಕಾರ್ನ್ ಪುಲಾವ್ ಟ್ರೈ ಮಾಡಿ ಅಲ್ವ…
ಬೇಕಾಗುವ ಸಾಮಗ್ರಿಗಳು
2 ಚಮಚ ಎಣ್ಣೆ
2 ಬೇ ಎಲೆಗಳು
1 ಟೀಸ್ಪೂನ್ ಜೀರಿಗೆ
1 ಕಪ್ಪು ಏಲಕ್ಕಿ
1 ಇಂಚಿನ ದಾಲ್ಚಿನ್ನಿ
3 ಏಲಕ್ಕಿ
1 ಜಾವೆತ್ರಿ
7 ಲವಂಗ
5 ಬೆಳ್ಳುಳ್ಳಿ ಎಸಳು
4 ಮೆಣಸಿನಕಾಯಿ
1 ಈರುಳ್ಳಿ , ಕತ್ತರಿಸಿದ್ದು
1 ಟೀಸ್ಪೂನ್ ಶುಂಠಿ ಪೇಸ್ಟ್
½ ಕ್ಯಾಪ್ಸಿಯಮ್
1½ ಕಪ್ ಸಿಹಿ ಜೋಳ
½ ಟೀಸ್ಪೂನ್ ಗರಂ ಮಸಾಲ
1 ಟೀಸ್ಪೂನ್ ಉಪ್ಪು
2 ಕಪ್ ನೀರು
1 ಕಪ್ ಬಾಸ್ಮತಿ ಅಕ್ಕಿ
2 ಟೀಸ್ಪೂನ್ ನಿಂಬೆ ರಸ
2 ಚಮಚ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲನೆಯದಾಗಿ, ಒಂದು ದೊಡ್ಡ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಬೇ ಎಲೆಗಳು, ಜೀರಿಗೆ, ಕಪ್ಪು ಏಲಕ್ಕಿ, ದಾಲ್ಚಿನ್ನಿ, ಏಲಕ್ಕಿ, ಜಾವೆತ್ರಿ,ಲವಂಗ ಸೇರಿಸಿ, ಜೊತೆಗೆ ಬೆಳ್ಳುಳ್ಳಿ ಎಸಳು,ಮೆಣಸಿನಕಾಯಿ ಸೇರಿಸಿ ಹುರಿಯಿರಿ. ಈಗ ಈರುಳ್ಳಿ, ಶುಂಠಿ ಪೇಸ್ಟ್ ಸೇರಿಸಿ ಈರುಳ್ಳಿ ಸ್ವಲ್ಪ ಪಾರದರ್ಶಕವಾಗುವವರೆಗೆ ಹುರಿಯಿರಿ.
ನಂತರ ಕ್ಯಾಪ್ಸಿಕಂ, ಸ್ವೀಟ್ ಕಾರ್ನ್, ಗರಂ ಮಸಾಲ ಮತ್ತು ಉಪ್ಪು ಸೇರಿಸಿ. ಜೋಳ ಪರಿಮಳ ಬರುವವರೆಗೆ ಹುರಿದು, 2 ಕಪ್ ನೀರು ಹಾಕಿ ಮತ್ತೆ ಕುದಿಸಿ. ಈಗ ಬಾಸ್ಮತಿ ಅಕ್ಕಿ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಚ್ಚಿ 20 ನಿಮಿಷಗಳ ಕಾಲ ಬೇಯಿಸಿ ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕಾರ್ನ್ ಪುಲಾವ್ ರೆಡಿ.