ಬೇಕಾಗುವ ಸಾಮಗ್ರಿಗಳು:
* ಸಿಗಡಿ – ಅರ್ಧ ಕೆಜಿ
* ಈರುಳ್ಳಿ – 1 ದೊಡ್ಡದು
* ಟೊಮೆಟೊ – 1
* ಹಸಿಮೆಣಸು – 2-3
* ತೆಂಗಿನತುರಿ – 1 ಕಪ್
* ಅಡುಗೆ ಎಣ್ಣೆ – 2-3 ಚಮಚ
* ಅರಿಶಿನ ಪುಡಿ – ಅರ್ಧ ಚಮಚ
* ಹುಣಸೆಹಣ್ಣು
* ನಿಂಬೆಹಣ್ಣು – 1
* ಕರಿಬೇವು
* ಕೊತ್ತಂಬರಿ ಸೊಪ್ಪು
* ಉಪ್ಪು – ರುಚಿಗೆ ತಕ್ಕಷ್ಟು
* ಧನಿಯಾ ಬೀಜ – 1-2 ಚಮಚ
* ಜೀರಿಗೆ – 1 ಚಮಚ
* ಮೆಣಸು ಕಾಳು – 8-10
* ಲವಂಗ – 2-3
* ಸೋಂಪು – ಅರ್ಧ ಚಮಚ
* ಒಣ ಕೆಂಪು ಮೆಣಸು – 2-3
ಮಾಡುವ ವಿಧಾನ:
ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಸಿಪ್ಪೆ ತೆಗೆದು ನೀರಲ್ಲಿ ಚೆನ್ನಾಗಿ ತೊಳೆಯಿರಿ. ಅದಕ್ಕೆ ಸ್ವಲ್ಪ ಅರಿಶಿನ, ಉಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 15-20 ನಿಮಿಷ ಮ್ಯಾರಿನೇಟ್ ಮಾಡಲು ಬಿಡಿ.
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಧನಿಯಾ, ಜೀರಿಗೆ, ಮೆಣಸು, ಲವಂಗ, ಸೋಂಪು, ಮತ್ತು ಒಣ ಕೆಂಪು ಮೆಣಸು ಹಾಕಿ ಘಮ ಬರುವವರೆಗೆ ಹುರಿಯಿರಿ. ನಂತರ ಇದನ್ನು ಆರಲು ಬಿಟ್ಟು, ತೆಂಗಿನತುರಿ ಮತ್ತು ಸ್ವಲ್ಪ ಹುಣಸೆ ರಸ ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ದಪ್ಪ ತಳದ ಬಾಣಲೆ ಅಥವಾ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಕರಿಬೇವು ಹಾಕಿ. ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ಈಗ ಕತ್ತರಿಸಿದ ಟೊಮೆಟೊ ಮತ್ತು ಹಸಿಮೆಣಸು ಸೇರಿಸಿ, ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಮ್ಯಾರಿನೇಟ್ ಮಾಡಿದ ಸಿಗಡಿಯನ್ನು ಸೇರಿಸಿ, ಉಪ್ಪು ಮತ್ತು ಸ್ವಲ್ಪ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪಾತ್ರೆಯನ್ನು ಮುಚ್ಚಿ, ಸಿಗಡಿ ನೀರು ಬಿಟ್ಟು ಬೆಂದು ಮೃದುವಾಗುವವರೆಗೆ 5-7 ನಿಮಿಷ ಬೇಯಿಸಿ. ಸಿಗಡಿ ಬೇಗ ಬೇಯುತ್ತದೆ, ಹೆಚ್ಚು ಬೇಯಿಸಿದರೆ ರಬ್ಬರ್ ತರಹ ಆಗುತ್ತದೆ.
ಈಗ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಬಹುದು, ಆದರೆ ಸುಕ್ಕಾ ದಪ್ಪವಾಗಿ ಇರಬೇಕು. ಎಣ್ಣೆ ಬಿಡುವವರೆಗೆ ಮತ್ತು ಮಸಾಲೆ ಸಿಗಡಿಗೆ ಚೆನ್ನಾಗಿ ಹಿಡಿಯುವವರೆಗೆ 5-7 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ಕಡೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ, ಉರಿ ಆಫ್ ಮಾಡಿ.
ರುಚಿಯಾದ ಸಿಗಡಿ ಸುಕ್ಕಾ ಬಿಸಿ ಬಿಸಿ ಅನ್ನ, ನೀರ್ ದೋಸೆ, ಚಪಾತಿ, ಅಥವಾ ಕುಚ್ಚಲಕ್ಕಿ ಊಟದ ಜೊತೆ ಸವಿಯಲು ಸಿದ್ಧ.