ಖರ್ಝಿ ರೈಸ್ ಅರುಣಾಚಲ ಪ್ರದೇಶದ ಮೊನ್ಪಾ ಬುಡಕಟ್ಟು ಜನಾಂಗದ ಖಾದ್ಯವಾಗಿದ್ದು, ತುಂಬಾ ರುಚಿಕರವಾಗಿರುತ್ತದೆ. ಇದು ಮಾಡೋದು ಕೂಡ ಸುಲಭ.
ಬೇಕಾಗುವ ಪದಾರ್ಥಗಳು
2 ಕಪ್ ಬೇಯಿಸಿದ ಅನ್ನ
3-4 ಒಣ ಕೆಂಪು ಮೆಣಸಿನಕಾಯಿಗಳು
2 ಚಮಚ ಚೀಸ್
ಶುಂಠಿ
ಬೆಳ್ಳುಳ್ಳಿ 3-4 ಎಸಳು
1 ಟೊಮೆಟೊ
ಉಪ್ಪು
1/2 ಕಪ್ ಸ್ಪ್ರಿಂಗ್ ಆನಿಯನ್
1/4 ಕಪ್ ಹಸಿರು ಬಟಾಣಿ (ಬೇಯಿಸಿದ್ದು)
1 ಟೀ ಚಮಚ ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಕೆಂಪು ಒಣ ಮೆಣಸಿನಕಾಯಿಗಳನ್ನು ಬಿಸಿ ನೀರಿನಲ್ಲಿ 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ.
ಈಗ ಟೊಮೆಟೊ, ನೆನೆಸಿದ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಸ್ವಲ್ಪ ಶುಂಠಿಯನ್ನು ಬ್ಲೆಂಡರ್‌ನಲ್ಲಿ ಹಾಕಿ, 2 ಚಮಚ ಚೀಸ್, ಉಪ್ಪು ಸೇರಿಸಿ ರುಬ್ಬಿ ಪೇಸ್ಟ್ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಈ ಪೇಸ್ಟ್ ಸೇರಿಸಿ, ಶುಂಠಿಯ ಹಸಿ ವಾಸನೆ ಹೋಗುವವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
ನಂತರ ಇದಕ್ಕೆ ಸ್ಪ್ರಿಂಗ್ ಆನಿಯನ್ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಮಿಶ್ರಣ ಮಾಡಿ. ಈಗ ಇದಕ್ಕೆ ಬೇಯಿಸಿದ ಬಟಾಣಿ ಸೇರಿಸಿ ಸ್ವಲ್ಪ ಫ್ರೈ ಮಾಡಿ ಕೊನೆಗೆ ಬಿಸಿ ಅನ್ನ ಹಾಕಿ ವಿಶ್ರಾಂತ್ ಮಾಡಿದರೆ ಖರ್ಝಿ ರೈಸ್ ರೆಡಿ.