ಚಿಕನ್‌ನಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಇವತ್ತು ಸರಳವಾಗಿ ಚಿಕನ್ ಮಸಾಲ ಮಾಡೋದು ಹೇಗೆ ಅಂತಾ ನೋಡೋಣ.
ಬೇಕಾಗುವ ಪದಾರ್ಥಗಳು:
750 ಗ್ರಾಂ ಕೋಳಿ ಮಾಂಸ
2 ಕಪ್ ಕತ್ತರಿಸಿದ ಈರುಳ್ಳಿ
ಉಪ್ಪು ಅಗತ್ಯಕ್ಕೆ ತಕ್ಕಷ್ಟು
2 ಇಂಚು ದಾಲ್ಚಿನ್ನಿ
2 ಹಸಿರು ಏಲಕ್ಕಿ
1 ಚಮಚ ಶುಂಠಿ ಪೇಸ್ಟ್
2 ಚಮಚ ಕೊತ್ತಂಬರಿ ಪುಡಿ
1 ಕಪ್ ನೀರು
2 ಚಮಚ ಜೀರಿಗೆ ಪುಡಿ
1 ಚಮಚ ಗರಂ ಮಸಾಲೆ ಪುಡಿ
1 ಚಮಚ ತುಪ್ಪ
4 ಚಮಚ ಸಾಸಿವೆ ಎಣ್ಣೆ
1/2 ಕಪ್ ಸಣ್ಣಗೆ ಹೆಚ್ಚಿದ ಟೊಮೆಟೊ
3 ಚಮಚದಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು
2 ಬಿರಿಯಾನಿ ಎಲೆ
1 ಕಪ್ಪು ಏಲಕ್ಕಿ
2 ಚಮಚ ಬೆಳ್ಳುಳ್ಳಿ ಪೇಸ್ಟ್
1 ಚಮಚ ಅರಿಶಿನ ಪುಡಿ
2 ಚಮಚ ಕೆಂಪು ಮೆಣಸಿನ ಪುಡಿ
2 ಹಸಿ ಮೆಣಸಿನಕಾಯಿ
2 ಚಮಚ ಕಸೂರಿ ಮೇಥಿ
ಮಾಡುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಮತ್ತು ತುಪ್ಪ ಸೇರಿಸಿ ಬಿಸಿಯಾದಾಗ, ಬಿರಿಯಾನಿ ಎಲೆ, ಏಲಕ್ಕಿ, ದಾಲ್ಚಿನ್ನಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಒಂದು ನಿಮಿಷ ಹುರಿದ ನಂತರ ಅದಕ್ಕೆ ಕೋಳಿ ಮಾಂಸವನ್ನು ಸೇರಿಸಿ. ಚಿಕನ್ ಬಿಳಿ ಬಣ್ಣ ಬರುವವರೆಗೆ 2 ರಿಂದ 3 ನಿಮಿಷ ಬೇಯಿಸಿ.
ಕೋಳಿ ಮಾಂಸ ಸ್ವಲ್ಪ ಬೆಂದಾಗ ಅದಕ್ಕೆ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನು ಒಂದು ನಿಮಿಷ ಬೇಯಿಸಿ ನಂತರ ಸಣ್ಣಗೆ ಹೆಚ್ಚಿದ ಟೊಮೆಟೊ ಮತ್ತು ಹಸಿಮೆಣಸಿನಕಾಯಿಗಳನ್ನು ಹಾಕಿ. ಈಗ ಉರಿಯನ್ನು ಕಡಿಮೆ ಮಾಡಿ 6 ರಿಂದ 7 ನಿಮಿಷಗಳ ಕಾಲ ಮುಚ್ಚಿಟ್ಟು, ನಂತರ ಚಿಕನ್ ಕಂದು ಬಣ್ಣ ಬರುವವರೆಗೆ ಮುಚ್ಚಳವಿಲ್ಲದೆ ಬೇಯಿಸಿ.
ಈಗ ಒಂದು ಕಪ್‌ನಷ್ಟು ನೀರು ಬೆರೆಸಿ ನಂತರ ಗರಂ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಪುಡಿ ಹಾಕಿ. ಚಿಕನ್‌ನಿಂದ ಎಣ್ಣೆ ಬೇರ್ಪಡುವವರೆಗೆ ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ ಚಿಕನ್ ಮಸಾಲ ರೆಡಿ.