ಅವಲಕ್ಕಿ ದೋಸೆ ಆರೋಗ್ಯಕರ ಮತ್ತು ರುಚಿಕರವಾದ ದೋಸೆ ವಿಧವಾಗಿದೆ. ಇದನ್ನು ಬೆಳಗ್ಗೆ ಅಥವಾ ಸಾಯಂಕಾಲದ ತಿಂಡಿಯಾಗಿ ಕೂಡ ತಯಾರಿಸಬಹುದು. ಅವಲಕ್ಕಿಯು ದೇಹಕ್ಕೆ ತಂಪು ನೀಡುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯಕವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಅವಲಕ್ಕಿ – 1 ಕಪ್
ಅಕ್ಕಿ – 1 ಕಪ್
ಮಜ್ಜಿಗೆ – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – 1 ಚಮಚ
ಹಸಿಮೆಣಸು – 2
ಶುಂಠಿ – 1 ಇಂಚು ತುಂಡು
ತೆಂಗಿನಕಾಯಿ ತುರಿ – 2 ಟೇಬಲ್ ಸ್ಪೂನ್
ನೀರು – ಬೇಕಾದಷ್ಟು
ಎಣ್ಣೆ – ಸ್ವಲ್ಪ
ಮಾಡುವ ವಿಧಾನ:
ಮೊದಲು ಅವಲಕ್ಕಿ ಮತ್ತು ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಇದಕ್ಕೆ ಮಜ್ಜಿಗೆ, ಜೀರಿಗೆ, ಹಸಿಮೆಣಸು, ಶುಂಠಿ ಹಾಗೂ ಉಪ್ಪು ಹಾಕಿ, ಮಿಕ್ಸಿ ಜಾರ್ ನಲ್ಲಿ ರುಬ್ಬಿ ದೋಸೆ ಹಿಟ್ಟಾಗಿ ತಯಾರಿಸಿಕೊಳ್ಳಿ.
ಇದೀಗ ಕಾವಲಿ ಮೇಲೆ ಹಿಟ್ಟು ಹಾಕಿ, ದೋಸೆ ಮಾಡಿ ಗೋಲ್ಡನ್ ಬ್ರೌನ್ ಆಗುವವರೆಗೆ ದೋಸೆ ಬೇಯಿಸಿದರೆ ಆಯಿತು.