ಹಗುರವಾದ ತಿಂಡಿಗೆ, ಸಿನಿಮಾ ನೋಡುತ್ತಾ, ಅಥವಾ ಚಿಟ್–ಚಾಟ್ ಮಾಡ್ತಿರೋವಾಗ ತಿನ್ನೋಕೆ ಎಲ್ಲರೂ ಇಷ್ಟಪಡುವ ಕ್ರಿಸ್ಪಿ ಸ್ನ್ಯಾಕ್ ಅಂದ್ರೆ ಅದು ಫ್ರೆಂಚ್ ಫ್ರೈಸ್. ಹೊರಗೆ ಗೋಲ್ಡನ್–ಕ್ರಿಸ್ಪಿ, ಒಳಗೆ ಮೃದುವಾಗಿರುವ ಈ ಫ್ರೈಸ್‌ಗಳನ್ನು ಮನೆಯಲ್ಲಿ ಮಾಡಿ ತಿನ್ನೋದು ಇನ್ನೂ ಟೇಸ್ಟಿ ಮತ್ತು ಆರೋಗ್ಯಕರ.
ಆವಶ್ಯಕ ಸಾಮಗ್ರಿಗಳು:
ಆಲೂಗಡ್ಡೆ — 4
ಐಸ್ ವಾಟರ್
ಕಾರ್ನ್ ಫ್ಲವರ್ — 2 ಟೇಬಲ್ ಸ್ಪೂನ್
ಉಪ್ಪು — ರುಚಿಗೆ ತಕ್ಕಷ್ಟು
ಎಣ್ಣೆ — ಕರಿಯಲು
ತಯಾರಿಸುವ ವಿಧಾನ:
ಆಲೂಗಡ್ಡೆಗಳನ್ನು ಉದ್ದ–ಉದ್ದ ಸ್ಟ್ರಿಪ್ಸ್ ಆಗಿ ಕತ್ತರಿಸಿ, ತಕ್ಷಣವೇ ಐಸ್ ವಾಟರ್‌ನಲ್ಲಿ 15–20 ನಿಮಿಷ ನೆನೆಸಿಡಿ.
ಈಗ ನೀರು ತೆಗೆದು, ಕಿಚನ್ ಟವಲ್‌ನಲ್ಲಿ ಇಟ್ಟು ಚೆನ್ನಾಗಿ ಒಣಗಿಸಿ.
ಇನ್ನೊಂದು ಬಟ್ಟಲಲ್ಲಿ ಕತ್ತರಿಸಿ ಆಲೂಗಡ್ಡೆ, ಕಾರ್ನ್ ಫ್ಲವರ್ ಮತ್ತು ಸ್ವಲ್ಪ ಉಪ್ಪಿನ ಮಿಶ್ರಣದಲ್ಲಿ ಫ್ರೈಸ್‌ಗಳನ್ನು ಕೋಟ್ ಮಾಡಿ, ಕಾದ ಎಣ್ಣೆಯಲ್ಲಿ ಮಧ್ಯಮ ತಾಪಮಾನದಲ್ಲಿ ಫ್ರೆಂಚ್ ಫ್ರೈಸ್ ಅನ್ನು ಕರಿದು ತೆಗೆದು ತಣ್ಣಗಾಗಲು ಬಿಡಿ.
ಈಗ ಮತ್ತೆ 5 ನಿಮಿಷದ ನಂತರ, ಅದೇ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕ್ರಿಸ್ಪಿ ಆಗಿ ಕರಿದುಕೊಳ್ಳಿ. ಮೇಲೆ ಉಪ್ಪು ಹಾಗೂ ಏನೇ ಬೇಕಾದ ಸೀಸನಿಂಗ್ (ಪೇರಿ ಪೇರಿ, ಚಾಟ್ ಮಸಾಲಾ) ಹಾಕಿ ಸರ್ವ್ ಮಾಡಿ.

