ಬಿಸಿಬಿಸಿ ಚಹಾ ಅಥವಾ ಕಾಫಿ ಜೊತೆಗೆ ಸ್ನ್ಯಾಕ್ಸ್ ಬೇಕಾದರೆ ಪಕೋಡಾ ಒಳ್ಳೆಯ ಆಯ್ಕೆ. ಮನೆಲ್ಲ ಉಳಿದಿರೋ ತರಕಾರಿಗಳಿಂದ ಸಿಂಪಲ್‌ಅಗಿ ತಯಾರಿಸಬಹುದಾದ ಕ್ರಿಸ್ಪಿ ವೆಜಿಟೆಬಲ್ ಪಕೋಡಾ ಎಲ್ಲರಿಗೂ ಇಷ್ಟವಾಗುವ ಹೋಮ್‌ಮೇಡ್ ಕ್ರಿಸ್ಪಿ ತಿಂಡಿ.
ಬೇಕಾಗುವ ಪದಾರ್ಥಗಳು:
1 ಸಣ್ಣ ಆಲೂಗಡ್ಡೆ, ಸಣ್ಣಗೆ ಕತ್ತರಿಸಿದ್ದು
1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ
1/4 ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ
1/4 ಕಪ್ ಸಣ್ಣಗೆ ಹೆಚ್ಚಿದ ಕ್ಯಾರೆಟ್
1/2 ಕಪ್ ಸಣ್ಣಗೆ ಹೆಚ್ಚಿದ ಎಲೆಕೋಸು
1/4 ಕಪ್ ಸಣ್ಣಗೆ ಹೆಚ್ಚಿದ ಹೂಕೋಸು
1/4 ಕಪ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಹಸಿರು ಮೆಣಸಿನಕಾಯಿ
3/4 ಕಪ್ ಕಡಲೆ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು
ಒಂದು ಚಿಟಿಕೆ ಅಡಿಗೆ ಸೋಡಾ,
1/4 ಟೀಚಮಚ ಕೆಂಪು ಮೆಣಸಿನ ಪುಡಿ
ನೀರು – ಅಗತ್ಯವಿರುವಂತೆ
ಎಣ್ಣೆ, ಡೀಪ್ ಫ್ರೈಗೆ
ಮಾಡುವ ವಿಧಾನ:
ಮೊದಲು ಎಲ್ಲಾ ತರಕಾರಿಗಳನ್ನು ಸಣ್ಣಗೆ ಕತ್ತರಿಸಿ ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿ. ಇದಕ್ಕೆ ಕಡಲೆ ಹಿಟ್ಟು, ಉಪ್ಪು, ಅಡಿಗೆ ಸೋಡಾ ಮತ್ತು ಮೆಣಸಿನ ಪುಡಿ ಸೇರಿಸಿ. ಈಗ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಬ್ಯಾಟರ್ ತಯಾರಿಸಿಕೊಳ್ಳಿ. ತುಂಬಾ ನೀರಾಗದಂತೆ ನೋಡಿಕೊಳ್ಳಿ.
ಒಂದು ಫ್ರೈಯಿಂಗ್ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿ ಆದ ನಂತರ, ಕೈಯಿಂದ ಅಥವಾ ಚಮಚದಿಂದ ಸ್ವಲ್ಪ ಬ್ಯಾಟರ್ ತೆಗೆದು ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಯಿಂದ ಚೆನ್ನಾಗಿ ಬೇಯಿಸಿದರೆ ಕ್ರಿಸ್ಪಿ ವೆಜಿಟೆಬಲ್ ಪಕೋಡಾ ರೆಡಿ.