ಪ್ರತಿದಿನ ಒಂದೇ ತರಹದ ಅನ್ನ ಅಥವಾ ಬಾತ್ ತಿನ್ನೋದು ಸಿಕ್ಕಾಪಟ್ಟೆ ಬೋರಗಿದ್ಯಾ? ಹೀಗಾಗಿ ಸ್ವಲ್ಪ ವಿಭಿನ್ನವಾದ ಹಾಗೂ ಆರೋಗ್ಯಕರ ಪದಾರ್ಥಗಳನ್ನು ಒಳಗೊಂಡ ಬಿರಿಯಾನಿ ಮಾಡಬೇಕೆಂದಿದ್ದರೆ ಕಾಬೂಲ್ ಕಡಲೆ ಬಿರಿಯಾನಿ ಬೆಸ್ಟ್ ಆಯ್ಕೆ.
ಬೇಕಾಗುವ ಪದಾರ್ಥಗಳು:
ಕಾಬೂಲ್ ಕಡಲೆ – 2 ಕಪ್ಗಳು
ಅಕ್ಕಿ – 2 ಕಪ್ಗಳು
ತೆಂಗಿನ ಹಾಲು – 2 ಕಪ್ಗಳು
ನೀರು- 1 1/2 ಕಪ್
ಈರುಳ್ಳಿ – 2
ಟೊಮೆಟೊ – 2
ಮೆಣಸಿನ ಪುಡಿ – 1ಟೀ ಸ್ಪೂನ್
ಗರಂ ಮಸಾಲ – 1ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಟೀ ಸ್ಪೂನ್
ತುಪ್ಪ – 2 1ಟೀ ಸ್ಪೂನ್
ಎಣ್ಣೆ – 1ಕಪ್
ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ,
ಕೊತ್ತಂಬರಿ
ಪುದೀನಾ
ಬೆಳ್ಳುಳ್ಳಿ-2
ಹಸಿಮೆಣಸಿನ ಕಾಯಿ-2
ಮಾಡುವ ವಿಧಾನ
ಮೊದಲಿಗೆ ಕಡಲೆಗಳನ್ನು ಕುಕ್ಕರ್ನಲ್ಲಿ ಬೇಯಿಸಿ, ನಂತರ ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಗೂ ಎಣ್ಣೆ ಹಾಕಿ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಇತ್ಯಾದಿಗಳನ್ನು ಹುರಿದು ನಂತರ ಈರುಳ್ಳಿ, ಟೊಮೆಟೊ ಹಾಗೂ ರುಬ್ಬಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಬೇಯಿಸಿ.
ಬಳಿಕ ಅಕ್ಕಿ ಮತ್ತು ಬೇಯಿಸಿದ ಕಡಲೆಗಳನ್ನು ಸೇರಿಸಿ ನೀರು ಹಾಗೂ ತೆಂಗಿನ ಹಾಲು ಹಾಕಿ ಕುಕ್ಕರ್ನಲ್ಲಿ ಬೇಯಿಸಿದರೆ ರುಚಿಕರವಾದ ಕಾಬೂಲ್ ಕಡಲೆ ಬಿರಿಯಾನಿ ರೆಡಿ.