ಆರೋಗ್ಯ ಮತ್ತು ರುಚಿಯ ಸಮತೋಲನ ಬೇಕಾದಾಗ ಸೋಯಾ ಚಂಕ್ಸ್ ಪುಲಾವ್ ಉತ್ತಮ ಆಯ್ಕೆ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಸಾಂಪ್ರದಾಯಿಕ ಭೋಜನಕ್ಕೂ ಹೊಸ ಆಯಾಮ ನೀಡುತ್ತದೆ.
ಬೇಕಾಗುವ ಪದಾರ್ಥಗಳು:
1/2 ಕಪ್ ಬಾಸ್ಮತಿ ಅಕ್ಕಿ
1/2 ಕಪ್ ಸೋಯಾ ಚಂಕ್ಸ್
1/4 ಕಪ್ ಸಣ್ಣಗೆ ಹೆಚ್ಚಿದ ಕ್ಯಾರೆಟ್
1/4 ಕಪ್ ಬಟಾಣಿ
1/2 ಟೀಸ್ಪೂನ್ ಜೀರಿಗೆ
ಬೇ ಎಲೆಯ 1
2-3 ಕರಿಮೆಣಸು
1 ಸಣ್ಣ ತುಂಡು ದಾಲ್ಚಿನ್ನಿ
2-3 ಲವಂಗ
1 ಮಧ್ಯಮ ಈರುಳ್ಳಿ
1 ಹಸಿರು ಮೆಣಸಿನಕಾಯಿ
1/4 ಟೀಚಮಚ ಅರಿಶಿನ ಪುಡಿ
1¼ ಕಪ್ ನೀರು
ಉಪ್ಪು
1 ಚಮಚ ಎಣ್ಣೆ ಅಥವಾ ತುಪ್ಪ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ತೊಳೆದು 15-20 ನಿಮಿಷಗಳ ಕಾಲ ನೀರಲ್ಲಿ ನೆನೆಸಿಡಿ. ಸೋಯಾ ಚಂಕ್ಸ್‌ಗಳನ್ನು ಬಿಸಿ ನೀರಲ್ಲಿ 15 ನಿಮಿಷ ನೆನೆಸಿದ ನಂತರ ಹೆಚ್ಚುವರಿ ನೀರನ್ನು ಹಿಂದಿ ತೆಗೆದು, 2-3 ಬಾರಿ ತೊಳೆದುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಜೀರಿಗೆ, ದಾಲ್ಚಿನ್ನಿ, ಲವಂಗ, ಕರಿಮೆಣಸು, ಬೇ ಎಲೆ ಹಾಕಿ ಫ್ರೈ ಮಾಡಿ. ನಂತರ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಈರುಳ್ಳಿ ಪಾರದರ್ಶಕವಾಗುವವರೆಗೆ ಹುರಿಯಿರಿ. ನಂತರ ಕ್ಯಾರೆಟ್ ಹಾಗೂ ಹಸಿರು ಬಟಾಣಿ ಸೇರಿಸಿ 2-3 ನಿಮಿಷ ಹುರಿಯಬೇಕು.
ಈ ಹಂತದಲ್ಲಿ ನೆನೆಸಿದ ಅಕ್ಕಿ ಮತ್ತು ಸೋಯಾ ಚಂಕ್ಸ್‌ಗಳನ್ನು ಸೇರಿಸಿ, ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ 1¼ ಕಪ್ ನೀರು ಮತ್ತು ಉಪ್ಪು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ನೀರು ಕುದಿದ ಮೇಲೆ ಉರಿಯನ್ನು ಕಡಿಮೆ ಮಾಡಿ, ಮುಚ್ಚಳ ಹಾಕಿ 10 ನಿಮಿಷ ಬೇಯಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಸರ್ವ್ ಮಾಡಿ.