ನಾಲೆಗೆಗೆ ರುಚಿ ನೀಡುವ, ಸುಲಭವಾಗಿ ತಯಾರಿಸಬಹುದಾದ ಆಲೂಗಡ್ಡೆ ದೋಸೆ ಈಗ ಮನೆಮನೆಯಲ್ಲಿ ಜನಪ್ರಿಯವಾಗುತ್ತಿದೆ. ಇದು ರಾಗಿ ಅಥವಾ ಗೋಧಿ ದೋಸೆಗಳಿಗಿಂತ ವಿಭಿನ್ನವಾಗಿದ್ದು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ – 3
ಮೈದಾ – 2 ಸ್ಪೂನ್
ಹಸಿಮೆಣಸು – 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅಡುಗೆಎಣ್ಣೆ – ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಮೊದಲು ಆಲೂಗಡ್ಡೆಗಳನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆದು ಪಕ್ಕದಲ್ಲಿ ಇಡಿ. ನಂತರ, ಒಂದು ಪಾತ್ರೆಗೆ ಈ ಬೇಯಿಸಿದ ಆಲೂಗಡ್ಡೆ ಹಾಕಿ ಮ್ಯಾಶ್ ಮಾಡಿ, ಮೈದಾ ಮತ್ತು ಉಪ್ಪನ್ನು ಸೇರಿಸಿ ಮೃದುವಾದ ಹಿಟ್ಟಿನಂತೆ ಕಲಸಿ. ಹಿಟ್ಟು ಇಡ್ಲಿ ಹಿಟ್ಟಿನಂತೆ ಸ್ವಲ್ಪ ದಪ್ಪವಾಗಿರಲಿ.
ಈ ಹಿಟ್ಟಿಗೆ ತುರಿದ ಹಸಿಮೆಣಸು ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾಗಿಸಿದ ನಂತರ, ತಯಾರಾದ ಹಿಟ್ಟನ್ನು ತವಹಿಟ್ಟು ದೋಸೆಯಂತೆ ಹರಡಿ ಬೇಯಿಸಿರಿ. ಎರಡೂ ಬದಿಗಳೂ ಬೆಂದರೆ, ರುಚಿಯಾದ ಆಲೂಗಡ್ಡೆ ದೋಸೆ ಸವಿಯಲು ಸಿದ್ಧವಾಗುತ್ತದೆ.