ಹೆಸರೇ ಹೇಳುವಂತೆ ಮಸಾಲಾ ಖಿಚಡಿ ಎಂದರೆ ರುಚಿಕರ ಮಸಾಲೆಯೊಂದಿಗೆ ತಯಾರಿಸಿದ ಖಿಚಡಿ. ಇದು ಆರೋಗ್ಯಕರವಾದ, ಸುಲಭವಾಗಿ ತಯಾರಿಸಬಹುದಾದ ಹಾಗೂ ಹೊಟ್ಟೆ ತುಂಬಿದ ಅನುಭವ ನೀಡುವ ಬೆಳಗಿನ ಉಪಹಾರ.
ಅವಶ್ಯಕ ಪದಾರ್ಥಗಳು:
ಅಕ್ಕಿ – 1 ಕಪ್
ತೊಗರಿಬೇಳೆ ಅಥವಾ ಮುಂಗ್‌ದಾಲ್ – ½ ಕಪ್
ಹುರಿದ ಈರುಳ್ಳಿ – 1
ಟೊಮಾಟೊ – 1
ಹಸಿಮೆಣಸು – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮಿಶ್ರ ತರಕಾರಿಗಳು (ಕ್ಯಾರೆಟ್, ಬೀನ್ಸ್, ಬಟಾಣಿ, ಹೀಗೆ) – 1 ಕಪ್
ಅರಿಶಿನ ಪುಡಿ – ½ ಟೀಸ್ಪೂನ್
ಕೆಂಪು ಮೆಣಸು ಪುಡಿ – 1 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ತುಪ್ಪ ಅಥವಾ ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 3 ಕಪ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಅಕ್ಕಿ ಮತ್ತು ಬೇಳೆಯನ್ನು ತೊಳೆದು 15 ನಿಮಿಷ ನೆನೆಸಿಡಿ. ಈಗ ಕುಕ್ಕರ್‌ಗೆ ತುಪ್ಪ ಹಾಕಿ, ಜೀರಿಗೆ,ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಹುರಿಯಿರಿ. ನಂತರ ಟೊಮಾಟೋ, ಹಸಿಮೆಣಸು, ಅರಶಿನ, ಮೆಣಸು, ಧನಿಯಾ ಪುಡಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ 2 ನಿಮಿಷ ಹುರಿದ ಬಳಿಕ ನೆನೆಸಿದ ಅಕ್ಕಿ-ಬೇಳೆ ಮಿಶ್ರಣ ಸೇರಿಸಿ.
ಈಗ 3 ಕಪ್ ನೀರು ಹಾಗೂ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಕುಕ್ಕರ್ ಮುಚ್ಚಿ 3 ಅಥವಾ 4 ವಿಶಲ್ ಬರುವವರೆಗೆ ಬೇಯಿಸಿ. ಕೊನೆಗೆ ಗರಂ ಮಸಾಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಸಾಲಾ ಖಿಚಡಿ ರೆಡಿ.