ಆರೋಗ್ಯಕರ ಹಾಗೂ ರುಚಿಕರವಾದ ರೆಸಿಪಿಯ ಹುಡುಕಾಟದಲ್ಲಿ ನೀವು ಇದ್ದರೆ, ಈ ಸ್ಪಿನಾಚ್ ಆಮ್ಲೆಟ್ ಟ್ರೈ ಮಾಡಿ. ಕೇವಲ 10-15 ನಿಮಿಷದಲ್ಲಿ ತಯಾರಾಗೋ ಸ್ಪಿನಾಚ್ ಆಮ್ಲೆಟ್ ಹೇಗೆ ಮಾಡೋದು ಅಂತ ನೋಡೋಣ.
ಬೇಕಾಗುವ ಪದಾರ್ಥಗಳು
4 ಮೊಟ್ಟೆ
ಪಾಲಕ್ ಸೊಪ್ಪು / ಸ್ಪಿನಾಚ್ 1 ಗೊಂಚಲು,
6 ಸ್ಪ್ರಿಂಗ್ ಆನಿಯನ್ ಗ್ರೀನ್ಸ್ , (ನುಣ್ಣಗೆ ಕತ್ತರಿಸಿದ್ದು)
1/2 ಟೀಸ್ಪೂನ್ ಅರಿಶಿನ ಪುಡಿ
2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀಸ್ಪೂನ್ ಉಪ್ಪು
4 ಚಮಚ ಹಾಲು
2 ಸ್ಪೂನ್ ವರ್ಜಿನ್ ಆಲಿವ್ ಎಣ್ಣೆ
ಮಾಡುವ ವಿಧಾನ
ಮೊದಲು ಪಾಲಕ್ ಅನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. 1 ನಿಮಿಷ ನೀರಿನಲ್ಲಿ ಬೇಯಿಸಿ.
ಇನ್ನೊಂದು ಬೌಲ್ ನಲ್ಲಿ ಮೊಟ್ಟೆಗಳನ್ನು ಹಾಕಿ ಚೆನ್ನಾಗಿ ಬೀಟ್ ಮಾಡಿ. ಇದಕ್ಕೆ ಅರಿಶಿನ ಪುಡಿ ಮತ್ತು ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ ಕಲಸಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಮತ್ತು ಕತ್ತರಿಸಿದ ಪಾಲಕ್ ಅನ್ನು ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿ.
ಕೊನೆಯದಾಗಿ, ಹಾಲು ಮತ್ತು ಉಪ್ಪನ್ನು ಸೇರಿಸಿ, ಎಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೆ ಮತ್ತೊಮ್ಮೆ ಬೀಟ್ ಮಾಡಿ. ಒಂದು ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ ಅದರ ಮೇಲೆ ಆಲಿವ್ ಎಣ್ಣೆಯನ್ನು ಹರಡಿ. ಬಿಸಿಯಾದ ನಂತರ, ಮೊಟ್ಟೆಯ ಮಿಶ್ರಣವನ್ನು ಪ್ಯಾನ್ ನಲ್ಲಿ ಹರಡಿ ಎರಡು ಬದಿ ಚನ್ನಾಗಿ ಬೇಯಿಸಿದರೆ ಸ್ಪಿನಾಚ್ ಆಮ್ಲೆಟ್ ರೆಡಿ.