Tuesday, September 23, 2025

Food | ದೇವಿಗೆ ಇಷ್ಟವಾದ ಕ್ಷೀರಾನ್ನ ಮಾಡೋದು ಹೇಗೆ ಗೊತ್ತಿದ್ಯಾ? ಇಲ್ಲಿದೆ ರೆಸಿಪಿ


ಬೇಕಾಗುವ ಸಾಮಗ್ರಿಗಳು:

  • ಅಕ್ಕಿ – 1 ಕಪ್
  • ಹಾಲು – 1 ಲೀಟರ್
  • ಕಲ್ಲು ಸಕ್ಕರೆ – 1 ಕಪ್ (ರುಚಿಗೆ ತಕ್ಕಂತೆ ಹೆಚ್ಚು ಅಥವಾ ಕಡಿಮೆ ಮಾಡಬಹುದು)
  • ಏಲಕ್ಕಿ – 4 (ಪುಡಿ ಮಾಡಿ)
  • ತುಪ್ಪ – 1/2 ಕಪ್
  • ಗೋಡಂಬಿ – 20 ರಿಂದ 25
  • ಒಣದ್ರಾಕ್ಷಿ – 2 ಟೀಸ್ಪೂನ್
  • ಕೇಸರಿ (ಬೇಕಿದ್ದರೆ) – ಚಿಟಿಕೆ
    ಮಾಡುವ ವಿಧಾನ:
  • ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು 10-15 ನಿಮಿಷಗಳ ಕಾಲ ನೆನೆಸಿಡಿ. ಹೀಗೆ ಮಾಡುವುದರಿಂದ ಅಕ್ಕಿ ಬೇಗನೆ ಮತ್ತು ಮೆತ್ತಗೆ ಬೇಯುತ್ತದೆ.
  • ಒಂದು ದೊಡ್ಡ ಪಾತ್ರೆಯಲ್ಲಿ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ. ಹಾಲು ಕುದಿ ಬರುತ್ತಿದ್ದಂತೆ ನೆನೆಸಿದ ಅಕ್ಕಿಯನ್ನು ಸೇರಿಸಿ.
  • ಅಕ್ಕಿ ಸಂಪೂರ್ಣವಾಗಿ ಮೆತ್ತಗಾಗುವವರೆಗೆ ನಿಧಾನವಾಗಿ ಬೇಯಿಸಿ. ಹಾಲು ತಳ ಹಿಡಿಯದಂತೆ ಆಗಾಗ ಸೌಟಿನಿಂದ ಕಲಕುತ್ತಿರಿ.
  • ಅಕ್ಕಿ ಪೂರ್ತಿಯಾಗಿ ಬೆಂದ ನಂತರ ಕಲ್ಲು ಸಕ್ಕರೆ ಸೇರಿಸಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಕಲಕಿ.
  • ಈಗ ಏಲಕ್ಕಿ ಪುಡಿ ಮತ್ತು ಕೇಸರಿ ದಳಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಮತ್ತೊಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ.
  • ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ನೇರವಾಗಿ ಕ್ಷೀರಾನ್ನಕ್ಕೆ ಹಾಕಿ.
  • ಎಲ್ಲವನ್ನೂ ಒಟ್ಟಿಗೆ ಚೆನ್ನಾಗಿ ಮಿಶ್ರಣ ಮಾಡಿ, ಕೆಲವು ನಿಮಿಷಗಳ ಕಾಲ ಬೇಯಿಸಿ ನಂತರ ಒಲೆ ಆಫ್ ಮಾಡಿ.
    ನಿಮ್ಮ ರುಚಿಯಾದ ಮತ್ತು ಪರಿಮಳಯುಕ್ತ ಕ್ಷೀರಾನ್ನ ಈಗ ದೇವರಿಗೆ ನೈವೇದ್ಯ ಮಾಡಲು ಸಿದ್ಧವಾಗಿದೆ. ದಸರಾ ಅಥವಾ ಯಾವುದೇ ವಿಶೇಷ ದಿನದಂದು ಇದನ್ನು ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ.

ಇದನ್ನೂ ಓದಿ