Friday, September 5, 2025

FOOD | ಸಾಂಬಾರ್ ಮಾಡೋಕೆ ತರಕಾರಿ ಇಲ್ವಾ? ಈ ಸಿಂಪಲ್ ಬೆಳ್ಳುಳ್ಳಿ ರಸಂ ಟ್ರೈ ಮಾಡಿ

ಮಳೆಗಾಲ ಅಥವಾ ಚಳಿಗಾಲದಲ್ಲಿ ಬಿಸಿ ಬಿಸಿ ರಸಂ ಸವಿಯೋದ್ರಲ್ಲಿ ಒಂದು ವಿಭಿನ್ನ ಆನಂದವಿರುತ್ತದೆ. ವಿಶೇಷವಾಗಿ ಬೆಳ್ಳುಳ್ಳಿ ರಸಂ ಆರೋಗ್ಯಕ್ಕೂ, ರುಚಿಗೂ ಉತ್ತಮ. ಈ ರಸಂ ಗಂಟಲು ನೋವು, ಶೀತ, ಜ್ವರದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಹೀಗಾಗಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬೆಳ್ಳುಳ್ಳಿ ರಸಂ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಬೆಳ್ಳುಳ್ಳಿ – 8 ರಿಂದ 10 ಎಸಳು
ಹಸಿಮೆಣಸು – 2
ಟೊಮ್ಯಾಟೊ – 1
ಹುಣಸೆಹಣ್ಣು – ಒಂದು ನಿಂಬೆ ಗಾತ್ರ
ಕಾಳು ಮೆಣಸು – 1 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ ಕರಿಯಲು ತುಪ್ಪ/ಎಣ್ಣೆ – 2 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ತಯಾರಿಸುವ ವಿಧಾನ

ಮೊದಲು ಬೆಳ್ಳುಳ್ಳಿಯನ್ನು ಸ್ವಲ್ಪ ಜಜ್ಜಿಕೊಳ್ಳಿ. ಮತ್ತೆ ಕಪ್ಪು ಮೆಣಸು ಮತ್ತು ಜೀರಿಗೆ ಒಟ್ಟಿಗೆ ಹುರಿದು, ಪುಡಿ ಮಾಡಿಕೊಳ್ಳಿ.

ಒಂದು ಪಾತ್ರೆಯಲ್ಲಿ ಹುಣಸೆ ನೀರನ್ನು ಹಾಕಿ, ಸಣ್ಣಗೆ ಕತ್ತರಿಸಿರುವ ಟೊಮ್ಯಾಟೊ, ಮೆಣಸು-ಜೀರಿಗೆ ಪುಡಿ, ಉಪ್ಪು ಸೇರಿಸಿ ಕುದಿಯಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ/ಎಣ್ಣೆ ಬಿಸಿ ಮಾಡಿ, ಅದಕ್ಕೆ ಜಜ್ಜಿದ ಬೆಳ್ಳುಳ್ಳಿ, ಕರಿಬೇವು ಹಾಕಿ ಬಣ್ಣ ಬದಲಾಯುವವರೆಗೂ ಕರಿಯಿರಿ.

ಇದನ್ನು ಕುದಿಯುತ್ತಿರುವ ರಸಂಗೆ ಹಾಕಿ, ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಬೆಳ್ಳುಳ್ಳಿ ರಸಂ ರೆಡಿ.

ಇದನ್ನೂ ಓದಿ