ಮನೇಲಿ ಅನ್ನ ಮಿಕ್ಕಿದ್ರೆ ಅದನ್ನ ಬಿಸಾಡೋ ಬದಲು ಈ ಟೇಸ್ಟಿ ವಡೆ ಟ್ರೈ ಮಾಡಿ. ಮಾಡೋದು ಬಹಳ ಸುಲಭ.
ಬೇಕಾಗುವ ಪದಾರ್ಥಗಳು:
ಅನ್ನ – 2 ಕಪ್
ಕೊತ್ತಂಬರಿ ಸೊಪ್ಪು – 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು)
ಕರಿಬೇವು – ಐದಾರು ಎಳಸು
ಜೀರಿಗೆ – ಅರ್ಧ ಚಮಚ
ಇಂಗು – ಚಿಟಿಕೆ
ಉಪ್ಪು – ರುಚಿಗೆ
ಎಣ್ಣೆ – ಕರಿಯಲು
ಹೆಚ್ಚಿದ ಟೊಮೆಟೊ – ಕಾಲು ಕಪ್
ಕ್ಯಾಪ್ಸಿಕಂ – ಕಾಲು ಕಪ್
ಕ್ಯಾಬೇಜ್ – ಕಾಲು ಕಪ್
ಖಾರದಪುಡಿ – 1 ಚಮಚ
ಮೊಸರು – 1ಕಪ್
ಕೊಬ್ಬರಿ ತುರಿ – 1ಕಪ್
ಶುಂಠಿ ಹಸಿಮೆಣಸು ಪೇಸ್ಟ್ – 2 ಚಮಚ
ಮಾಡುವ ವಿಧಾನ
ಒಂದು ಪಾತ್ರೆಗೆ ಮೊಸರು, ಅನ್ನ ಹಾಕಿ ಕೈಯಲ್ಲಿ ಕಿವುಚಿ ಪೇಸ್ಟ್ ರೀತಿ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿಟ್ಟುಕೊಂಡ ಟೊಮೆಟೊ, ಕ್ಯಾಬೇಜ್, ಶುಂಠಿ, ಹಸಿಮೆಣಸಿನ ಪೇಸ್ಟ್, ಖಾರದ ಪುಡಿ, ಕೊಬ್ಬರಿ ತುರಿ, ಹೆಚ್ಚಿದ್ದ ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು ಹಾಗೂ ಕರಿಬೇವಿನ ಎಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 10 ನಿಮಿಷಗಳ ಕಾಲ ಬಿಡಿ.
ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅನ್ನದ ಹಿಟ್ಟಿನಿಂದ ವಡೆ ಆಕಾರ ತಯಾರಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ರುಚಿಯಾದ ವಡೆ ರೆಡಿ.