ಮಳೆ ಬಂದು ತಂಪಾಗಿರೋ ಈ ಟೈಮ್ ನಲ್ಲಿ ದೇಹವನ್ನು ಬೆಚ್ಚಗಿಡುವುದಷ್ಟೇ ಅಲ್ಲದೆ, ಪೋಷಕಾಂಶಗಳನ್ನು ನೀಡುವ ಆಹಾರವೂ ಅಗತ್ಯ. ಇಂತಹ ಸಂದರ್ಭಗಳಲ್ಲಿ ಕಡಿಮೆ ಕ್ಯಾಲೊರಿ, ಹೆಚ್ಚಿನ ಪ್ರೋಟೀನ್ ಹಾಗೂ ವಿಟಮಿನ್ಗಳ ಸಮನ್ವಯ ಹೊಂದಿರುವ ಕಡಲೆ–ಕ್ಯಾರೆಟ್ ಸೂಪ್ ಒಳ್ಳೆಯ ಆಯ್ಕೆ.
ಬೇಕಾಗುವ ಸಾಮಾಗ್ರಿಗಳು
ಕಡಲೆ – 2 ಕಪ್ (ರಾತ್ರಿಯಿಡೀ ನೆನೆಸಿದವು)
ಕ್ಯಾರೆಟ್ – 2
ಈರುಳ್ಳಿ – 1
ಬೆಳ್ಳುಳ್ಳಿ – 4
ಲವಂಗ – 2
ಬೆಣ್ಣೆ – 2 ಟೇಬಲ್ ಸ್ಪೂನ್
ಕೆಂಪು ಮೆಣಸಿನ ಪುಡಿ – ½ ಟೀಚಮಚ
ಕರಿಮೆಣಸು – ಅಗತ್ಯಕ್ಕೆ ತಕ್ಕಂತೆ
ಉಪ್ಪು – ಅಗತ್ಯಕ್ಕೆ ತಕ್ಕಂತೆ
ನೀರು – ಅಗತ್ಯಕ್ಕೆ ತಕ್ಕಂತೆ
ತಯಾರಿಸುವ ವಿಧಾನ
ಮೊದಲಿಗೆ ನೆನೆಸಿದ ಕಡಲೆ ಹಾಗೂ ಕ್ಯಾರೆಟ್ ಅನ್ನು ಪ್ರೆಶರ್ ಕುಕ್ಕರ್ನಲ್ಲಿ ಮೃದುವಾಗುವವರೆಗೆ ಬೇಯಿಸಿ. ಬೇಯಿಸಿದ ಕಡಲೆ ಹಾಗೂ ಕ್ಯಾರೆಟ್ ಸ್ವಲ್ಪ ತಣ್ಣಗಾದ ನಂತರ, ಮಿಕ್ಸರ್ನಲ್ಲಿ ಮೃದುವಾಗಿ ಅರೆದು ಸೂಪ್ ಮಿಶ್ರಣ ತಯಾರಿಸಿ.
ಈಗ ಒಂದು ಪ್ಯಾನ್ನಲ್ಲಿ ಬೆಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಗೂ ಈರುಳ್ಳಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ತಯಾರಿಸಿದ ಸೂಪ್ ಮಿಶ್ರಣವನ್ನು ಪ್ಯಾನ್ಗೆ ಸೇರಿಸಿ, ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ.
ಈಗ ಉಪ್ಪು, ಕರಿಮೆಣಸು ಹಾಗೂ ಕೆಂಪು ಮೆಣಸಿನ ಪುಡಿ ಸೇರಿಸಿ, ಮಧ್ಯಮ ಉರಿಯಲ್ಲಿ ಕೆಲವು ನಿಮಿಷ ಕುದಿಸಿ ಬಿಸಿ ಬಿಸಿಯಾಗಿ ಸವಿಯಿರಿ.