Saturday, September 20, 2025

FOOD | ತಂಪಾಗಿರೋ ವಾತಾವರಣದಲ್ಲಿ ಬಿಸಿ ಬಿಸಿ ಅಕ್ಕಿ ರೊಟ್ಟಿ ತಿಂತಿದ್ರೆ ಅದ್ರ ಮಜಾನೇ ಬೇರೆ!

ಅಕ್ಕಿ ರೊಟ್ಟಿ ಕರ್ನಾಟಕದ ಮನೆಮಾತಾದ ಒಂದು ಬೆಳಗ್ಗಿನ ತಿಂಡಿ.ಉಪಾಹಾರಕ್ಕೂ, ಸಂಜೆ ತಿಂಡಿಯಾಗಿಯೂ ಇದನ್ನು ಸವಿಯಬಹುದು. ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಈರುಳ್ಳಿ ಸೇರಿಸಿ ಮಾಡಿದರೆ ಇನ್ನಷ್ಟು ರುಚಿಯಾಗಿರುತ್ತದೆ. ಬಿಸಿ ಬಿಸಿ ಅಕ್ಕಿ ರೊಟ್ಟಿಗೆ ಬೆಣ್ಣೆ, ಚಟ್ನಿ ಅಥವಾ ಸಾಂಬಾರ್ ಜೊತೆ ಸೇವಿಸಿದರೆ ಅದ್ಭುತ ರುಚಿ ಕೊಡುತ್ತದೆ.

ಬೇಕಾಗುವ ಸಾಮಗ್ರಿಗಳು:

ಅಕ್ಕಿ ಹಿಟ್ಟು – 2 ಕಪ್
ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದ)
ಹಸಿರು ಮೆಣಸಿನಕಾಯಿ – 2 (ಸಣ್ಣದು)
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ತುರಿದ ಕ್ಯಾರಟ್ – 2 ಟೇಬಲ್ ಸ್ಪೂನ್ (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಬೇಯಿಸಲು

ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಹಾಕಿ, ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ, ಕ್ಯಾರಟ್ ಹಾಗೂ ಉಪ್ಪು ಸೇರಿಸಿ. ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ, ಮೃದುವಾದ ಹಿಟ್ಟು ತಯಾರಿಸಿ.

ಈಗ ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಬಾಳೆ ಎಲೆ ಮೇಲೆ ಸ್ವಲ್ಪ ಎಣ್ಣೆ ಸವರಿ. ಹಿಟ್ಟಿನ ಒಂದು ಉಂಡೆ ತೆಗೆದು, ತೆಳುವಾಗಿ ಒತ್ತಿ ರೊಟ್ಟಿ ಮಾಡಿಕೊಳ್ಳಿ. ಈಗ ಬಿಸಿ ತವೆಯ ಮೇಲೆ ಹಾಕಿ, ಸ್ವಲ್ಪ ಎಣ್ಣೆ ಸವರಿ, ಎರಡೂ ಬದಿಗಳನ್ನು ಬಂಗಾರದ ಬಣ್ಣ ಬರುವವರೆಗೆ ಬೇಯಿಸಿ.

ಇದನ್ನೂ ಓದಿ