ಎಗ್ ಪಲಾವ್ ಮಾಡೋದಕ್ಕೆ ಅನ್ನವನ್ನು ಬೇಯಿಸಿ ಸಿದ್ಧಗೊಳಿಸಿದರೆ ಸಾಕು ಐದು ನಿಮಿಷಗಳಲ್ಲಿ ತಯಾರಾಗುತ್ತೆ. ಈ ಪಲಾವ್ ಮಾಡೋದು ಹೇಗೆ ಅಂತಾ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – ನಾಲ್ಕು
ಕಸೂರಿ ಮೇಥಿ – ಅರ್ಧ ಚಮಚ
ಅರಿಶಿನ – ಅರ್ಧ ಚಮಚ
ಮೆಣಸಿನ ಪುಡಿ – ಒಂದು ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ – ಎರಡು ಚಮಚ
ತುಪ್ಪ – ಅರ್ಧ ಚಮಚ
ಬಿರಿಯಾನಿ ಎಲೆ – ಎರಡು
ಲವಂಗ – ಮೂರು
ದಾಲ್ಚಿನ್ನಿ – ಒಂದು ಸಣ್ಣ ತುಂಡು
ಅನಾನಸ್ ಹೂವು – ಒಂದು
ಏಲಕ್ಕಿ – ಎರಡು
ಈರುಳ್ಳಿ – ಒಂದು
ಹಸಿ ಮೆಣಸಿನಕಾಯಿ – ಮೂರು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ
ಟೊಮೆಟೊ – ಎರಡು
ನಕ್ಷತ್ರ ಮೊಗ್ಗು – ಒಂದು
ಶಾಜಿರಾ – ಒಂದು ಚಮಚ
ಗರಂ ಮಸಾಲ – ಅರ್ಧ ಚಮಚ
ಕೊತ್ತಂಬರಿ ಪುಡಿ – ಒಂದು ಚಮಚ
ಜೀರಿಗೆ ಪುಡಿ – ಒಂದು ಚಮಚ
ಕೊತ್ತಂಬರಿ ಪುಡಿ – ಎರಡು ಚಮಚ
ನಿಂಬೆ ರಸ – ಒಂದು ಚಮಚ
ಮಾಡುವ ವಿಧಾನ:
ಮೊಟ್ಟೆಯನ್ನು ಹಾಗೂ ಅನ್ನವನ್ನು ಮೊದಲೇ ಬೇಯಿಸಿಡಬೇಕು. ಉಳಿದ ಅನ್ನದಿಂದಲೂ ಮಾಡಬಹುದು.
ಈಗ ಒಂದು ಬೌಲ್ ಗೆ ಅರಿಶಿನ, ಮೆಣಸಿನ ಪುಡಿ, ಕಸೂರಿ ಮೇಥಿ, ಎರಡು ಹನಿ ಎಣ್ಣೆ ಹಾಕಿ ಜೊತೆಗೆ ಬೇಯಿಸಿದ ಮೊಟ್ಟೆಯನ್ನು ನಾಲ್ಕು ತುಂಡುಗಳಾಗಿ ಮಾಡಿ ಈ ಮಿಶ್ರಣಕ್ಕೆ ಹಾಕಿ. ಈಗ ಒಲೆಯ ಮೇಲೆ ಬಾಣಲೆ ಇಟ್ಟು ಅರ್ಧ ಚಮಚ ಎಣ್ಣೆ ಹಾಕಿ. ಮೊಟ್ಟೆಯನ್ನು ಇದಕ್ಕೆ ಹಾಕಿ ಹುರಿದು ಪಕ್ಕಕ್ಕೆ ಇರಿಸಿ.
ಈಗ ಇನ್ನೆರಡು ಚಮಚ ಎಣ್ಣೆ ಹಾಕಿ ಬಿರಿಯಾನಿ ಎಲೆ, ಲವಂಗ, ಶಾಜೀರಾ, ನಕ್ಷತ್ರ ಮೊಗ್ಗು ಮತ್ತು ಅನಾನಸ್ ಹೂವುಗಳನ್ನು ಹುರಿಯಿರಿ. ನಂತರ, ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣಗೆ ಹೆಚ್ಚಿದ ಟೊಮೆಟೊ ಹಾಕಿ ಮಿಶ್ರಣ ಮಾಡಿ. ಈ ಸಂಪೂರ್ಣ ಮಿಶ್ರಣವು ನಯವಾದ ಪೇಸ್ಟ್ ಆಗುವಂತೆ ನೋಡಿಕೊಳ್ಳಿ.
ನಂತರ ಕೊತ್ತಂಬರಿ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಮತ್ತು ಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಮೊದಲೇ ಬೇಯಿಸಿದ ಮೊಟ್ಟೆ ಹಾಗೂ ಬೇಯಿಸಿದ ಅನ್ನವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಎಗ್ ಪಲಾವ್ ಸಿದ್ಧ.