ಊಟದ ಜೊತೆ ಏನಾದ್ರೂ ಹೊಸದು, ಸ್ಪೈಸಿಯಾಗಿರೋ ಪಲ್ಯ ಬೇಕಾ? ಹಾಗಾದ್ರೆ ಇಂದಿನ ಸಿಂಪಲ್, ಹಾಗೂ ರುಚಿಯಾದ ಡಿಶ್ ಎಗ್ ಪೆಪ್ಪರ್ ಡ್ರೈ! 10 ನಿಮಿಷದಲ್ಲಿ ತಯಾರಾಗೋ ಈ ಡಿಶ್ ಅನ್ನ, ಚಪಾತಿ ಅಥವಾ ರೊಟ್ಟಿ ಜೊತೆಗೆ ತುಂಬಾ ರುಚಿ.
ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ – 4
ಎಣ್ಣೆ – 2-3 ಚಮಚ
ಮೆಣಸಿನ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿಣ – ಚಿಟಿಕೆ
ಮಾಡುವ ವಿಧಾನ:
ಮೊದಲು ನಾಲ್ಕು ಮೊಟ್ಟೆಗಳನ್ನು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಒಂದು ವಿಶಲ್ ಕೂಗುವಷ್ಟು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ಬೇಯಿಸಿದ ಮೊಟ್ಟೆಗಳನ್ನು ಸಿಪ್ಪೆ ತೆಗೆದು, ಎರಡು ಭಾಗಗಳಾಗಿ ಕತ್ತರಿಸಿ ತಯಾರಾಗಿ ಇಡಿ.
ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಮೊಟ್ಟೆ ಕಟ್ ಭಾಗವನ್ನು ಕೆಳಗಿಟ್ಟು ಸ್ವಲ್ಪ ಬಣ್ಣ ಬರುವವರೆಗೂ ಫ್ರೈ ಮಾಡಿ. ಈಗ ಮೊಟ್ಟೆಗಳನ್ನು ತಿರುಗಿಸಿ, ಮತ್ತೊಂದು ಬದಿಯನ್ನೂ ಸ್ವಲ್ಪ ಕ್ರಿಸ್ಪಿ ಆಗುವವರೆಗೆ ಬೇಯಿಸಿ.
ಚಿಟಿಕೆ ಅರಿಶಿಣ, ಉಪ್ಪು ಮತ್ತು ಮೆಣಸು ಪುಡಿ ಮೊಟ್ಟೆಯ ಎರಡೂ ಬದಿಗೆ ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.

