September 28, 2026
Monday, September 28, 2026
spot_img

ಖಮೇನಿ ಹತ್ಯೆ ಬಳಿಕ ಉದ್ವಿಗ್ನತೆ: ಅಮೆರಿಕ ಜತೆ ಮಾತುಕತೆಗೆ ‘ನೋ’ ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್–ಅಮೆರಿಕಾ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಸಾವಿನ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಈ ಹಿನ್ನೆಲೆ ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಉಲ್ಲೇಖಿಸಿ ಅಲ್ ಜಜೀರಾ, ಒಮಾನ್ ಮಧ್ಯವರ್ತಿತ್ವದ ಮೂಲಕ ವಾಷಿಂಗ್ಟನ್ ಜತೆ ಸಂಭಾಷಣೆ ಪುನರಾರಂಭಕ್ಕೆ ಲಾರಿಜಾನಿ ಸಿದ್ಧತೆ ತೋರಿದ್ದಾರೆ ಎಂದು ಹೇಳಿತ್ತು. ಆದರೆ ಈ ವರದಿಯನ್ನು ಲಾರಿಜಾನಿ ತಳ್ಳಿಹಾಕಿ, ಇಂತಹ ಚರ್ಚೆಗಳ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಅಮೆರಿಕ ಅಧ್ಯಕ್ಷರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಅಮೆರಿಕಾ ಮೊದಲು” ಎಂಬ ಘೋಷಣೆ “ಇಸ್ರೇಲ್ ಮೊದಲು” ಆಗಿ ಮಾರ್ಪಟ್ಟಿದೆ ಎಂದು ಟೀಕಿಸಿದರು. ಇಸ್ರೇಲ್ ಹಿತಾಸಕ್ತಿಗಾಗಿ ಅಮೆರಿಕನ್ ಸೈನಿಕರನ್ನು ಅಪಾಯಕ್ಕೆ ತಳ್ಳಲಾಗಿದೆ ಎಂದು ಆರೋಪಿಸಿದರು.

ಇರಾನ್ ಯಾವುದೇ ಆಕ್ರಮಣ ಆರಂಭಿಸಿಲ್ಲ; ದೇಶ ತನ್ನ ರಕ್ಷಣೆಗೆ ಮಾತ್ರ ಕ್ರಮ ಕೈಗೊಳ್ಳುತ್ತಿದೆ ಎಂದು ಲಾರಿಜಾನಿ ಸ್ಪಷ್ಟಪಡಿಸಿದರು. ಪ್ರದೇಶದಲ್ಲಿ ಸೈನಿಕ ಚಟುವಟಿಕೆ ಹೆಚ್ಚುತ್ತಿರುವ ಸೂಚನೆಗಳ ಮಧ್ಯೆ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

Must Read