FOOD | ಎಗ್‍ಲೆಸ್ ಚಾಕೊಲೇಟ್ ಬ್ರೌನಿ! ನಿಮ್ಮ ಮಕ್ಕಳಿಗೆ ಖಂಡಿತ ಇಷ್ಟವಾಗುತ್ತೆ ನೋಡಿ!

ಚಾಕೊಲೇಟ್ ಪ್ರಿಯರಿಗಿಂತಲೂ ಚಾಕೊಲೇಟ್ ಬ್ರೌನಿ ಪ್ರಿಯರು ಹೆಚ್ಚಾಗುತ್ತಿದ್ದಾರೆ. ಮೊಟ್ಟೆ ಇಲ್ಲದೆ ಸಾಫ್ಟ್ ಬ್ರೌನಿಯನ್ನು ತಯಾರಿಸಬಹುದಾ ಎಂಬ ಪ್ರಶ್ನೆ ಬಹುಮಂದಿಗೆ ಇರುತ್ತದೆ. ಹಾಗಾದರೆ ಇದಕ್ಕೆ ಸರಳ ಉತ್ತರವೇ ಈ ರೆಸಿಪಿ ನೋಡಿ. ಮನೆಯಲ್ಲೇ ಸುಲಭವಾಗಿ ‘ಎಗ್‌ಲೆಸ್ ಬ್ರೌನಿ’ ತಯಾರಿಸಿ.

ಬೇಕಾಗುವ ಪದಾರ್ಥಗಳು:

ಸಕ್ಕರೆ – 1 ಕಪ್
ಮೈದಾ – 3/4 ಕಪ್
ಬೇಕಿಂಗ್ ಪೌಡರ್ – 1ವರೆ ಟೀಸ್ಪೂನ್
ಕೋಕೋ ಪೌಡರ್ – 1/3 ಕಪ್(30 ಗ್ರಾಂ)
ಬೆಣ್ಣೆ – 1/2 ಕಪ್
ಮೊಸರು – 1/2 ಕಪ್
ವೆನಿಲ್ಲಾ ಎಸೆನ್ಸ್ – 1 ಟೀ ಸ್ಪೂನ್
ಸೆಮಿ ಸ್ವೀಟ್ ಚಾಕೊಲೇಟ್ ಚಿಪ್ಸ್ – 1/2 ಕಪ್

ಮಾಡುವ ವಿಧಾನ:

ಮೊದಲು ಒಂದು ಬಾಣಲೆ ಅಥವಾ ಓವನ್ ಅನ್ನು 10 ನಿಮಿಷಗಳಷ್ಟು ಪ್ರಿಹೀಟ್ ಆಗುವಂತೆ ಬಿಸಿ ಮಾಡಿ. ಬಳಿಕ ಬೆಣ್ಣೆಯನ್ನು ಕರಗಿಸಿ, ತಣ್ಣಗಾಗಲು ಬಿಡಿ. ಇನ್ನೊಂದೆಡೆ, ಸಕ್ಕರೆಯನ್ನು ಮಿಕ್ಸರ್‌ನಲ್ಲಿ ಪುಡಿಮಾಡಿಕೊಳ್ಳಿ. ಮೈದಾ ಮತ್ತು ಕೋಕೋ ಪೌಡರ್ ಅನ್ನು ಜರಡಿಸಿ, ಈ ಎರಡನ್ನೂ ಒಟ್ಟಾಗಿ ಮಿಶ್ರಣ ಮಾಡಿ.

ಮತ್ತೊಂದು ಬಟ್ಟಲಿನಲ್ಲಿ ಕರಗಿದ ಬೆಣ್ಣೆಗೆ ಮೊಸರು ಹಾಗೂ ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣಕ್ಕೆ ಸಕ್ಕರೆ-ಮೈದಾ-ಕೋಕೋ ಮಿಶ್ರಣ ಸೇರಿಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಅಥವಾ ಹಾಲು ಸೇರಿಸಿ ಗಟ್ಟಿಯಾದ ಲೆಯರ್ ಆಗುವಷ್ಟು ಕಲಸಿ.

ಇದಕ್ಕೆ ಚಾಕೊಲೇಟ್ ಚಿಪ್ಸ್‌ಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಬಟರ್ ಲೈನಿಂಗ್ ಮಾಡಿದ ಕೇಕ್ ಪ್ಯಾನ್‌ಗೆ ಹಾಕಿ. ಬಳಿಕ ಗ್ಯಾಸ್ನ ಮೇಲೆ ಅಥವಾ ಓವನ್‌ನಲ್ಲಿ 20–30 ನಿಮಿಷ ಬೇಯಿಸಿ. ಬೆಂದ ನಂತರ ಪ್ಯಾನ್‌ನಿಂದ ತೆಗೆಯುವ ಮೊದಲು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಬ್ರೌನಿಯನ್ನು ಚಾಕುವಿನಿಂದ ಇಷ್ಟವಾದ ಆಕಾರದಲ್ಲಿ ಕಟ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!