Monday, November 24, 2025

FOOD | ನಾಲಗೆಗೆ ರುಚಿ ಕೊಡು ನೆಲ್ಲಿಕಾಯಿ ತಿಳಿಸಾರು!

ನೆಲ್ಲಿಕಾಯಿ ನಮ್ಮ ಆರೋಗ್ಯಕ್ಕೆ ಔಷಧದಂತೆ ಕೆಲಸ ಮಾಡುವ ಒಂದು ಅದ್ಭುತ ಹಣ್ಣು. ವಿಟಮಿನ್–C ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇವತ್ತು ಆರೋಗ್ಯಕ್ಕೆ ಉತ್ತಮವಾಗಿರೋ ನೆಲ್ಲಿಕಾಯಿ ತಿಳಿಸಾರು ಮಾಡೋ ವಿಧಾನ ತಿಳ್ಕೊಳೋಣ.

ಬೇಕಾಗುವ ಸಾಮಗ್ರಿಗಳು

ನೆಲ್ಲಿಕಾಯಿ – 5 ರಿಂದ 6
ತೊಗರಿ ಬೇಳೆ – ½ ಕಪ್
ಹಸಿಮೆಣಸು – 2
ಶುಂಠಿ – ½ ಇಂಚು
ಕರಿಬೇವಿನ ಎಲೆ – 6-7
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ನೀರು – ಅಗತ್ಯಕ್ಕೆ
ತುಪ್ಪ – 1 ಟೀ ಸ್ಪೂನ್

ಮಾಡುವ ವಿಧಾನ

ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಪ್ರೆಷರ್ ಕುಕ್ಕರ್‌ನಲ್ಲಿ ಹಾಕಿ ಬೇಯಿಸಿಕೊಳ್ಳಿ.

ನೆಲ್ಲಿಕಾಯಿ ಬೀಜ ತೆಗೆದು, ಸಣ್ಣ ಸಣ್ಣ ಕತ್ತರಿಸಿ ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಹಸಿಮೆಣಸು ಮತ್ತು ನೆಲ್ಲಿಕಾಯಿ ತುಂಡುಗಳನ್ನು ಹಾಕಿ 5 ನಿಮಿಷ ಮೃದುವಾಗುವವರೆಗೆ ಬೇಯಿಸಿ.

ಈಗ ಬೇಯಿಸಿದ ಬೇಳೆಯನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ಅರಿಶಿನ, ಉಪ್ಪು ಹಾಕಿ ಬೇಯಲು ಬಿಡಿ. ಈಗ ಒಂದು ಚಿಕ್ಕ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಸಾಸಿವೆ–ಜೀರಿಗೆ, ಕರಿಬೇವಿನ ಎಲೆ ಹಾಕಿ ಒಗ್ಗರಣೆಯನ್ನು ಸಾರಿಗೆ ಹಾಕಿ.

error: Content is protected !!