ಕರಿಬೇವು ಆರೋಗ್ಯಕ್ಕೆ ಬಹಳ ಪೋಷಕಾಂಶ ಹೊಂದಿರುವ ಪರಿಮಳಯುಕ್ತವಾದ ಹಸಿರು ಎಲೆ. ಸಾಮಾನ್ಯವಾಗಿ ಒಗ್ಗರಣೆಯಲ್ಲಿ ಬಳಸಲಾಗುವ ಈ ಎಲೆಗಳ ಚಿತ್ರಾನ್ನ ತಿಂದಿದ್ದೀರಾ? ಆರೋಗ್ಯದೊಂದಿಗೆ ರುಚಿಯ ಸಂಯೋಜನೆಯಾದ ಈ ಪಾಕವಿಧಾನವನ್ನು ಮಾಡುವುದು ಸುಲಭ.
ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ಕರಿಬೇವು ಎಲೆ – 2 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಹುಣಸೆಹಣ್ಣಿನ ರಸ – 1/2 ಟೀಸ್ಪೂನ್
ಎಣ್ಣೆ – 3 ಟೀಬಲ್ ಸ್ಪೂನ್
ಹಸಿಮೆಣಸು – 2-3
ಇಂಗು – ಚಿಟಿಕೆ
ಸಾಸಿವೆ – 1 ಟೀಸ್ಪೂನ್
ಉದ್ದಿನಬೇಳೆ – 1 ಟೀಸ್ಪೂನ್
ಕಡಲೆಬೇಳೆ – 1 ಟೀಸ್ಪೂನ್
ಕೊಬ್ಬರಿ ತುರಿ – 2 ಟೀಬಲ್ ಸ್ಪೂನ್ (ಐಚ್ಛಿಕ)
ಮಾಡುವ ವಿಧಾನ:
ಮೊದಲಿಗೆ ಕರಿಬೇವು ಎಲೆ, ಹಸಿಮೆಣಸು, ಉಪ್ಪು, ಕರಿಬೇವು ಎಲೆ ಹಾಗೂ ಸ್ವಲ್ಪ ಎಣ್ಣೆ ಹಾಕಿ ಮಿಕ್ಸರ್ ನಲ್ಲಿ ರುಬ್ಬಿ.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಇಂಗು ಮತ್ತು ಹಸಿಮೆಣಸು ಸೇರಿಸಿ ಹುರಿಯಿರಿ. ಈಗ ಈ ಒಗ್ಗರಣೆಗೆ ತಯಾರಾದ ಕರಿಬೇವು ಪೇಸ್ಟ್ ಸೇರಿಸಿ 2 ನಿಮಿಷ ಫ್ರೈ ಮಾಡಿ.
ಈಗ ಈ ಮಿಶ್ರಣವನ್ನು ಅನ್ನದ ಮೇಲೆ ಹಾಕಿ, ತುರಿದ ಕೊಬ್ಬರಿ ಸೇರಿಸಿ ಚೆನ್ನಾಗಿ ಕಲಸಿದರೆ ಕರಿಬೇವಿನ ಚಿತ್ರಾನ್ನ ರೆಡಿ.