Friday, November 28, 2025

FOOD | ಆಂಧ್ರ ಸ್ಟೈಲ್ ಪಾಲಕ್ ಪಪ್ಪು ತಿಂದಿದ್ದೀರಾ? ನೀವೂ ಮನೆಯಲ್ಲೇ ಮಾಡಿ ನೋಡಿ

ಆಂಧ್ರ ಪ್ರದೇಶದ ಅಡುಗೆಶೈಲಿ ಎಂದರೆ ಖಾರ, ತಾಜಾ ರುಚಿಯ ಮಿಶ್ರಣ. ಇಂತಹ ವಿಶೇಷ ಅಡುಗೆಗಳಲ್ಲಿ ಪಾಲಕ್ ಪಪ್ಪು ಒಂದು ಸರಳ ಆದರೆ ಪೌಷ್ಟಿಕ ಸಾರು. ಸೊಪ್ಪು ತಿನ್ನದವರಿಗೂ ಇಷ್ಟವಾಗುವಂತೆ ಮಾಡುವ ರೆಸಿಪಿ ಇದು. ಬಿಸಿ ಅನ್ನ, ತುಪ್ಪ, ಉಪ್ಪಿನಕಾಯಿ ಜೊತೆ ಪಾಲಕ್ ಪಪ್ಪು ಸವಿದ್ರೆ ಊಟದ ಸ್ವಾದ ದುಪ್ಪಟ್ಟಾಗುತ್ತದೆ.

ಅಗತ್ಯ ಸಾಮಗ್ರಿಗಳು

ಪಾಲಕ್ ಸೊಪ್ಪು – 2 ಕಟ್ಟು
ತೊಗರಿ ಬೇಳೆ – ¾ ಕಪ್
ಈರುಳ್ಳಿ – 1
ಹಸಿರು ಮೆಣಸು – 2
ಟೊಮೆಟೊ – 1
ಬೆಳ್ಳುಳ್ಳಿ – 5–6 ಎಸಳು
ಅರಿಶಿನ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – 1 ಟೀಸ್ಪೂನ್
ಒಣ ಮೆಣಸು – 2
ಜೀರಿಗೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ತುಪ್ಪ – 1 ಟೀಸ್ಪೂನ್

ಮಾಡುವ ವಿಧಾನ

ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಅರಿಶಿನ ಹಾಕಿ 3 ಸಿಟ್ಟು ಬರುವವರೆಗೂ ಬೇಯಿಸಿ. ಪಾಲಕ್ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ದೊಡ್ಡದಾಗಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಪಾಲಕ್ ಹಾಕಿ 2 ನಿಮಿಷ ಬೇಯಿಸಿ, ನಂತರ ಮಿಕ್ಸಿಯಲ್ಲಿ ಒರಟಾಗಿ ರುಬ್ಬಿ.

ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ. ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿ ಸ್ವಲ್ಪ ಬಾಡಿಸಿ. ಇದಕ್ಕೆ ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ಈಗ ರುಬ್ಬಿದ ಪಾಲಕ್ ಸೇರಿಸಿ 2–3 ನಿಮಿಷ ಕುದಿಸಿ. ನಂತರ ಬೇಯಿಸಿದ ಬೇಳೆ, ಉಪ್ಪು ಸೇರಿಸಿ ಮತ್ತೊಮ್ಮೆ ಕುದಿಸಿ. ಕೊನೆಯಲ್ಲಿ ತುಪ್ಪ ಹಾಕಿದರೆ ಸ್ವಾದ ಇನ್ನಷ್ಟು ಹೆಚ್ಚುತ್ತದೆ.

error: Content is protected !!