ಇಡ್ಲಿ ನಮ್ಮ ದೈನಂದಿನ ಉಪಹಾರದ ಪ್ರಮುಖ ಭಾಗ. ಸಾಮಾನ್ಯವಾಗಿ ಅಕ್ಕಿಯಿಂದ ತಯಾರಾಗುವ ಇಡ್ಲಿಗೆ ನಾವು ಓಟ್ಸ್ ಉಪಯೋಗಿಸಬಹುದು. ಓಟ್ಸ್ ನಲ್ಲಿರುವ ಫೈಬರ್ ಮತ್ತು ಪೋಷಕಾಂಶಗಳು ದೇಹದ ತೂಕ ನಿಯಂತ್ರಣ, ಹೃದಯದ ಆರೋಗ್ಯ, ಹಾಗೂ ದೀರ್ಘಕಾಲದ ತೃಪ್ತಿ ನೀಡುತ್ತದೆ. ಟೊಮೆಟೊ ಚಟ್ನಿಯೊಂದಿಗೆ ಈ ಓಟ್ಸ್ ಇಡ್ಲಿ ನಿಜವಾಗಿಯೂ ಒಂದು ಆರೋಗ್ಯಕರ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಓಟ್ಸ್ -1 ಕಪ್
ರವೆ (ಸೂಜಿ)-1/2 ಕಪ್
ಮೊಸರು-1 ಕಪ್
ಹಸಿಮೆಣಸು-1-2 (ನುರಿದು)
ಎಣ್ಣೆ -1 ಟೀ ಸ್ಪೂನ್
ಕಾಳುಮೆಣಸು-1/2 ಟೀ ಸ್ಪೂನ್
ಉಪ್ಪು-ರುಚಿಗೆ ತಕ್ಕಷ್ಟು
ಬೇಕಿಂಗ್ ಸೋಡಾ / ಇನೋ-1/2 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು- ಸ್ವಲ್ಪ (ತೂರಿಸಿ)
ತುರಿದ ಕ್ಯಾರಟ್ -2 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
ಮೊದಲಿಗೆ ಓಟ್ಸ್ ಅನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ. ಇದು ತಣ್ಣಗಾದಮೇಲೆ ಮೇಲೆ ಮಿಕ್ಸರ್ ನಲ್ಲಿ ಪುಡಿ ಮಾಡಿ.
ಈಗ ಒಂದು ಬಟ್ಟಲಿನಲ್ಲಿ ಈ ಓಟ್ಸ್ ಪುಡಿ, ರವೆ, ಮೊಸರು, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಷ್ಟು ನೀರು ಸೇರಿಸಿ ಇಡ್ಲಿಹಿಟ್ಟಿನಂತೆ ಮಾಡಿಕೊಳ್ಳಿ. ಈ ಹಿಟ್ಟಿಗೆ ಇನೋ ಅಥವಾ ಬೇಕಿಂಗ್ ಸೋಡಾ ಸೇರಿಸಿ ಮಿಶ್ರಣ ಮಾಡಿ.
ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ, ಹಿಟ್ಟನ್ನು ಹಾಕಿ, 10-12 ನಿಮಿಷ ಸ್ಟೀಮ್ ಮಾಡಿದರೆ ಓಟ್ಸ್ ಇಡ್ಲಿ ರೆಡಿ.