ಮ್ಯಾಗಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ಮ್ಯಾಗಿನಲ್ಲೂ ವಿವಿಧ ಬಗೆಯ ರೆಸಿಪಿಗಳನ್ನು ಟ್ರೈ ಮಾಡಬಹುದು. ಇವತ್ತು ನಾವು ಮ್ಯಾಗಿ ಕಟ್ಲೆಟ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು
ಮ್ಯಾಗಿ- ಒಂದು ಪ್ಯಾಕೆಟ್,
ಈರುಳ್ಳಿ- ಒಂದು,
ಮೆಣಸಿನ ಪುಡಿ- ಒಂದು ಚಮಚ,
ಕಾರ್ನ್ ಫ್ಲೋರ್- ಒಂದು ಕಪ್,
ಕೊತ್ತಂಬರಿ ಸೊಪ್ಪು- ಒಂದು ಚಮಚ,
ಉಪ್ಪು ರುಚಿಗೆ ತಕ್ಕಷ್ಟು,
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು,
ನೀರು- ಅಗತ್ಯಕ್ಕೆ ತಕ್ಕಷ್ಟು,
ಅರಿಶಿನ- ¼ ಟೀ ಚಮಚ,
ಕಾಳುಮೆಣಸಿನ ಪುಡಿ- ಒಂದು ಚಮಚ,
ಸಣ್ಣ ಆಲೂಗಡ್ಡೆ- 1,
ಮ್ಯಾಗಿ ಮಸಾಲ ಪುಡಿ- ಒಂದು ಚಮಚ.
ಮಾಡುವ ವಿಧಾನ
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮ್ಯಾಶ್ ಮಾಡಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ ಒಂದು ಈರುಳ್ಳಿ, ಹಸಿ ಮೆಣಸಿನಕಾಯಿ, ಕ್ಯಾರೆಟ್, ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಹುರಿಯಿರಿ. ನಂತರ ಇದಕ್ಕೆ ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಸೊಪ್ಪು, ಮ್ಯಾಗಿ ಮಸಾಲೆಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಒಗ್ಗರಣೆಗೆ ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಲೆ ಆಫ್ ಮಾಡಿ.
ಈಗ ಒಂದು ತಟ್ಟೆಯಲ್ಲಿ ಮ್ಯಾಗಿಯನ್ನು ಸಣ್ಣದಾಗಿ ಪುಡಿ ಮಾಡಿ, ಹುರಿದಿಟ್ಟಿರುವ ಮಿಶ್ರಣಕ್ಕೆ ಬೆರೆಸಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣವನ್ನು ಕಟ್ಲೆಟ್ ಆಕಾರ ಮಾಡಿಕೊಳ್ಳಿ. ನಂತರ ಒಂದು ಕಪ್ ಕಾರ್ನ್ ಫ್ಲೋರ್ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ. ಈ ಕಟ್ಲೆಟ್ಅನ್ನು ಅದರಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ಮ್ಯಾಗಿ ಕಟ್ಲೆಟ್ ರೆಡಿ.