FOOD | ಯಾವತ್ತಾದ್ರೂ ಗೋಧಿ ಹಿಟ್ಟಿನ ನೀರು ದೋಸೆ ತಿಂದಿದ್ದೀರಾ? ಇಲ್ಲಾಂದ್ರೆ ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಾಹಾರಕ್ಕೆ ತುಂಬಾ ಸರಳವಾಗಿ ತಯಾರಿಸಬಹುದಾದ ಉಪಾಹಾರ ಅಂದ್ರೆ ಅದು ಗೋಧಿ ಹಿಟ್ಟಿನ ನೀರು ದೋಸೆ. ಬಹಳ ಸಮಯ ತೆಗೆದುಕೊಳ್ಳದೇ, ಆರೋಗ್ಯಕರವಾಗಿಯೂ ಇರುವ ಈ ದೋಸೆ ಸಾಂಪ್ರದಾಯಿಕ ರುಚಿಯನ್ನೂ ನೀಡುತ್ತೆ. ಗೋಧಿಹಿಟ್ಟಿನಿಂದ ತಯಾರಾಗುವ ಈ ದೋಸೆ ಪ್ರೋಟೀನ್‌, ಫೈಬರ್ ಮತ್ತು ಇತರ ಪೋಷಕಾಂಶಗಳಿಂದ ಕೂಡಿದ್ದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತೆ.

ಬೇಕಾಗುವ ಪದಾರ್ಥಗಳು:

1 ಕಪ್ ಸಂಪೂರ್ಣ ಗೋಧಿ ಹಿಟ್ಟು
3/4 ಕಪ್ ಅಕ್ಕಿ ಹಿಟ್ಟು
1/4 ಕಪ್ ಹುಳಿ ಮಜ್ಜಿಗೆ
1 ಹಸಿರು ಮೆಣಸಿನಕಾಯಿ, ನುಣ್ಣಗೆ ಕತ್ತರಿಸಿದ್ದು
1/2 ಟೀಸ್ಪೂನ್ ಸಾಸಿವೆ
1/2 ಟೀಸ್ಪೂನ್ ಜೀರಿಗೆ
8-10 ಕರಿಬೇವು ಎಲೆಗಳು, ಕತ್ತರಿಸಿದ್ದು
1 ಟೀಸ್ಪೂನ್ ಎಣ್ಣೆ
3 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಒಂದು ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಹುಳಿ ಮಜ್ಜಿಗೆ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಹಾಕಿ ಅದಕ್ಕೆ ನೀರನ್ನು (ಸುಮಾರು 3-ಕಪ್) ಸ್ವಲ್ಪ ಸ್ವಲ್ಪವಾಗಿ ಸೇರಿಸಿ, ನಯವಾದ ಮತ್ತು ತೆಳುವಾದ ರವಾ ದೋಸೆ ಹಿಟ್ಟಿನಂತೆ (ಮಜ್ಜಿಗೆಯಂತೆ) ಮಿಶ್ರಣ ಮಾಡಿ.

ಈಗ ಒಗ್ಗರಣೆ ಪಾತ್ರೆಯಲ್ಲಿ 1 ಟೀಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ, ಸಾಸಿವೆ, ಜೀರಿಗೆ ಮತ್ತು ಕರಿಬೇವು ಸೇರಿಸಿದ ಈ ಒಗ್ಗರಣೆಯನ್ನು ಗೋಧಿ ಹಿಟ್ಟಿನ ಮಿಶ್ರಣಕ್ಕೆ ಹಾಕಿ.

ಮಧ್ಯಮ ಉರಿಯಲ್ಲಿ ನಾನ್-ಸ್ಟಿಕ್ ದೋಸೆ ತವಾವನ್ನು ಬಿಸಿ ಮಾಡಿ. ಸ್ವಲ್ಪ ಎಣ್ಣೆ ಸವರಿ ಗೋಧಿ ಹಿಟ್ಟಿನ ಮಿಶ್ರಣವನ್ನು ತ್ವದ ಮೇಲೆ ಹರಡಿ ಎರಡು ಬದಿ ಗರಿಗರಿಯಾಗುವವವರೆಗೆ ಬೇಯಿಸಿದರೆ ಗೋಧಿ ಹಿಟ್ಟಿನ ನೀರು ದೋಸೆ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!