ತಯಾರಿಸಲು ಸುಲಭವಾಗುವ ಮತ್ತು ಹೊಟ್ಟೆಗೆ ಹಿತವಾಗುವ ಈ ಮೊಸರು ದೋಸೆ ದಕ್ಷಿಣ ಭಾರತದ ಮನೆಮನೆಗಳಲ್ಲಿ ಕಂಡುಬರುವ ಒಂದು ಸ್ಪೆಷಲ್ ದೋಸೆ. ಬೆಳಗಿನ ಉಪಹಾರಕ್ಕೆ ಬೇಗನೆ ರೆಡಿ ಆಗೋ ಈ ದೋಸೆ ಮಾಡೋದು ತುಂಬಾನೇ ಸುಲಭ.
ಬೇಕಾಗುವ ಪದಾರ್ಥಗಳು
1 ಕಪ್ ಪೇಪರ್ ಅವಲಕ್ಕಿ
1 ಕಪ್ ರವೆ
1 ಕಪ್ ಮೊಸರು
1 ಟೀಸ್ಪೂನ್ ಉಪ್ಪು
ನೀರು , ಅಗತ್ಯವಿರುವಂತೆ
¼ ಟೀಸ್ಪೂನ್ ಅಡಿಗೆ ಸೋಡಾ
ಮಾಡುವ ವಿಧಾನ
ಮೊದಲಿಗೆ, ಒಂದು ಬಟ್ಟಲಿನಲ್ಲಿ 1 ಕಪ್ ಅವಲಕ್ಕಿಯನ್ನು ತೊಳೆದು, ನೀರನ್ನು ಹಿಂಡಿ ತೆಗೆದು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಈಗ ರವೆ,ಮೊಸರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದಷ್ಟು ನೀರು ಸೇರಿಸಿ, ಮುಚ್ಚಿ, 15 ನಿಮಿಷಗಳ ಕಾಲ ಬಿಡಿ. ನಂತರ ರವೆ ಮಿಶ್ರಣವನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ,½ ಕಪ್ ನೀರು ಸೇರಿಸಿ ನಯವಾದ ಹಿಟ್ಟು ಆಗುವವರೆಗೆ ರುಬ್ಬಿಕೊಳ್ಳಿ. ಜೊತೆಗೆ ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ದೋಸೆ ಹಿಟ್ಟನ್ನು ಬಿಸಿ ಪ್ಯಾನ್‌ಗೆ ಸುರಿಯಿರಿ ಮತ್ತು ನಿಧಾನವಾಗಿ ಹರಡಿ. ದೋಸೆ ಚೆನ್ನಾಗಿ ಬೇಯುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಮೊಸರು ದೋಸೆ ರೆಡಿ.