ಮೈಸೂರು ಪಾಕ್ ಅಂದ್ರೆ ಕರ್ನಾಟಕದ ಅತ್ಯಂತ ಪ್ರಸಿದ್ಧ ಸಿಹಿ. ತುಪ್ಪದಲ್ಲಿ ತಯಾರಾಗೋ ಈ ಸಿಹಿ ಎಲ್ಲರ ಬಾಯಲ್ಲಿ ನೀರೂರಿಸುವಂತದ್ದು. ಆದರೆ ಈಗಿನ ಪೀಳಿಗೆಯವರ ಚಾಕ್ಲೇಟ್ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು, ಮೈಸೂರು ಪಾಕ್‌ಗೆ ಚಾಕ್ಲೇಟ್ ಫ್ಲೇವರ್ ಸೇರಿಸಿ ಮಾಡಬಹುದಾದ ವಿಭಿನ್ನ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಕಡಲೆ ಹಿಟ್ಟು – 1 ಕಪ್
ಸಕ್ಕರೆ – 1 ½ ಕಪ್
ತುಪ್ಪ – 1 ಕಪ್
ಕೋಕೋ ಪೌಡರ್ – 1 ಟೀ ಸ್ಪೂನ್
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ತುಪ್ಪ ಕರಗಿಸಿ ಬೆಚ್ಚಗಾಗಲು ಬಿಡಿ. ಚೌಕಾಕಾರದ ಟ್ರೇ ಅಥವಾ ಬಟ್ಟಲಿಗೆ ಸ್ವಲ್ಪ ತುಪ್ಪ ಹಚ್ಚಿ ಬದಿಗಿಡಿ.
ಕಡಲೆ ಹಿಟ್ಟನ್ನು ಚೆನ್ನಾಗಿ ಶೋಧಿಸಿ, ಬಾಣಲೆಯಲ್ಲಿ 3–5 ನಿಮಿಷ ಹುರಿದು ಹಸಿ ವಾಸನೆ ಹೋಗುವಂತೆ ಮಾಡಿ. ನಂತರ ಬಟ್ಟಲಿನಲ್ಲಿ ಪಕ್ಕಕ್ಕೆ ಇಡಿ.ಈಗ ಹುರಿದ ಕಡಲೆ ಹಿಟ್ಟಿಗೆ ಕೋಕೋ ಪೌಡರ್ ಮತ್ತು ಅರ್ಧ ಕಪ್ ತುಪ್ಪ ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
ಇನ್ನೊಂದು ಬಾಣಲೆಯಲ್ಲಿ ¾ ಕಪ್ ನೀರು ಮತ್ತು ಸಕ್ಕರೆ ಹಾಕಿ ಕುದಿಯಲು ಬಿಡಿ. ಸಕ್ಕರೆ ಸಿರಪ್ ತಯಾರಾದಾಗ ಕಡಲೆ ಹಿಟ್ಟು-ಕೋಕೋ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬಿಸಿ ಮಾಡಿದ ತುಪ್ಪವನ್ನು ಸ್ವಲ್ಪ ಸ್ವಲ್ಪ ಸೇರಿಸುತ್ತಾ ಮಧ್ಯಮ ಉರಿಯಲ್ಲಿ ಹದವಾಗುವವರೆಗೆ ಕಲಸಿ.
ಮಿಶ್ರಣ ದಪ್ಪವಾಗಲು ಪ್ರಾರಂಭವಾದಾಗ ಉರಿ ಆಫ್ ಮಾಡಿ, ಗ್ರೀಸ್ ಮಾಡಿದ ಟ್ರೇಗೆ ಸುರಿಯಿರಿ. 10–15 ನಿಮಿಷಗಳ ಬಳಿಕ ಸ್ವಲ್ಪ ಗಟ್ಟಿಯಾದಾಗ ತುಂಡುಗಳಾಗಿ ಕತ್ತರಿಸಿ.