ಬೇಸನ್ ಆಮ್ಲೆಟ್ ಇದು ಸಸ್ಯಾಹಾರಿಗಳ ನಾನ್ ವೆಜ್ ತಿಂಡಿ. ಮೊಟ್ಟೆ ಆಮ್ಲೆಟ್ ತಿಂದು ಬೋರ್ ಆಗಿದೆ. ಅಥವಾ ತಿನ್ನುವುದು ಬೇಡ ಎಂದೆನಿಸಿದಾಗ ಈ ರೆಸಿಪಿ ಟ್ರೈ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು
ಬೇಸನ್ / ಕಡಲೆ ಹಿಟ್ಟು – ಒಂದು ಕಪ್
ಬೇಕಿಂಗ್ ಪೌಡರ್ – ಒಂದು ಟೀ ಚಮಚ
ಮೈದಾ- ಎರಡು ಟೀ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ನೀರು- ಅಗತ್ಯ ತಕ್ಕಷ್ಟು
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಹಸಿಮೆಣಸಿನಕಾಯಿ- ಎರಡು
ಕೊತ್ತಂಬರಿ ಸೊಪ್ಪು- ಸ್ವಲ್ಪ
ಈರುಳ್ಳಿ- ಒಂದು
ಟೊಮೆಟೊ- ಒಂದು
ಚಾಟ್ ಮಸಾಲೆ- ಅರ್ಧ ಟೀ ಚಮಚ
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಬೇಸನ್ / ಕಡಲೆ ಹಿಟ್ಟು, ಉಪ್ಪು, ಬೇಕಿಂಗ್ ಪೌಡರ್, ಮೈದಾ ಹಿಟ್ಟು ಹಾಗೂ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೇರಿಸಿ.
ಈಗ ಸ್ಟೌವ್ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಸವರಿ, ಈ ಹಿಟ್ಟಿನ ಮಿಶ್ರಣವನ್ನು ಆಮ್ಲೆಟ್ ರೀತಿಯಲ್ಲಿ ಹಾಕಿ ಎರಡೂ ಕಡೆ ಚೆನ್ನಾಗಿ ಫ್ರೈ ಮಾಡಿದರೆ ವೆಜ್ ಆಮ್ಲೆಟ್ ಅಥವಾ ಬೇಸನ್ ಆಮ್ಲೆಟ್ ತಿನ್ನಲು ರೆಡಿ.