ಬೆಳಗಿನ ಉಪಹಾರವಾಗಲಿ ಅಥವಾ ಸಂಜೆ ಟೀ ಟೈಮ್ ಆಗಲಿ ತಿನ್ನೋಕೆ ರುಚಿ ತುಂಬಿದ ಖಾದ್ಯ ಎಂದರೆ ಅದು ಮೊಸರು ದೋಸೆ. ಇದು ಮಾಡುವ ವಿಧಾನ ತುಂಬಾ ಸುಲಭ. ಮೊಸರು ಬಳಕೆಯಿಂದ ದೋಸೆಗೆ ಮೃದುತ್ವ ಮತ್ತು ವಿಶಿಷ್ಟ ರುಚಿ ಸಿಗುತ್ತದೆ. ಹೀಗಾಗಿ ನಿಮ್ಮ ಮನೆಯಲ್ಲಿಯೇ ಸಿಂಪಲ್ ಆಗಿ ಈ ರುಚಿಯಾದ ಮೊಸರು ದೋಸೆ ತಯಾರಿಸಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಉದ್ದಿನ ಬೇಳೆ – 1 ಕಪ್
ಅಕ್ಕಿ – 2 ಕಪ್
ಮೊಸರು – 2 ಕಪ್
ಅವಲಕ್ಕಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ – ಸ್ವಲ್ಪ
ಮಾಡುವ ವಿಧಾನ:
ಮೊದಲು ಅಕ್ಕಿ, ಅವಲಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸುಮಾರು 3 ಗಂಟೆಗಳ ಕಾಲ ನೆನೆಸಿಡಿ. ನಂತರ ಅದನ್ನು ನುಣ್ಣಗೆ ರುಬ್ಬಿ ಹಿಟ್ಟನ್ನು ತಯಾರಿಸಿ.
ಈ ಹಿಟ್ಟಿಗೆ ಮೊಸರು, ತುರಿದ ಬೆಲ್ಲ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟನ್ನು ಸುಮಾರು 8 ಗಂಟೆಗಳ ಕಾಲ ಮುಚ್ಚಿ ಇಡಿ — ಇದರಿಂದ ಹಿಟ್ಟು ಸ್ವಲ್ಪ ಹುಳಿ ಬರುವುದು.
ನಂತರ ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಚ್ಚಿ, ಒಂದು ಸ್ಪೂನ್ ಹಿಟ್ಟನ್ನು ಹಾಕಿ ದೋಸೆ ಆಕಾರದಲ್ಲಿ ಹರಡಿ. ಎರಡೂ ಬದಿಗಳು ಬಂಗಾರದ ಬಣ್ಣ ಬರುವವರೆಗೆ ಬೇಯಿಸಿ ತೆಗೆದುಕೊಳ್ಳಿ.