ಬೇಕಾಗುವ ಸಾಮಗ್ರಿಗಳು:
1/4 ಕಪ್ ಹೆಸರುಬೇಳೆ
1/2 ಕಪ್ ಬೆಲ್ಲ
1/4 ಕಪ್ ತೆಂಗಿನ ತುರಿ
2 ಏಲಕ್ಕಿ
1/2 ನಿಂಬೆಹಣ್ಣಿನ ರಸ
3-3 1/2 ಕಪ್ ನೀರು
ಮಾಡುವ ವಿಧಾನ:
ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು 1 1/2 ಕಪ್ ನೀರಿನಲ್ಲಿ ಒಂದು ಗಂಟೆ ಕಾಲ ನೆನೆಸಿಡಿ. ನೆನೆಸಿದ ಬೇಳೆಯಿಂದ ಅರ್ಧದಷ್ಟು ನೀರನ್ನು ಒಂದು ಕಪ್‌ಗೆ ತೆಗೆಯಿರಿ. ಮಿಕ್ಸರ್ ಜಾರ್‌ಗೆ ನೆನೆಸಿದ ಹೆಸರುಬೇಳೆ, ತೆಂಗಿನ ತುರಿ, ಬೆಲ್ಲ ಮತ್ತು ಏಲಕ್ಕಿ ಹಾಕಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಉಳಿದ ನೀರಿನೊಂದಿಗೆ ಸೇರಿಸಿ ಶೋಧಿಸಿಕೊಳ್ಳಿ. ಬೇಕಿದ್ದರೆ ನಿಂಬೆರಸ ಸೇರಿಸಿ. ತಣ್ಣಗಾದ ನಂತರ ಕುಡಿಯಲು ನೀಡಿ. ಇದು ಬೇಸಿಗೆಗೆ ತುಂಬಾ ತಂಪು ಮತ್ತು ಆರೋಗ್ಯಕರವಾದ ಪಾನಕ. ನೀವು ಬೇಕಿದ್ದರೆ ಇದಕ್ಕೆ ಸ್ವಲ್ಪ ಶುಂಠಿ ಅಥವಾ ಒಣಶುಂಠಿ ಪುಡಿಯನ್ನು ಕೂಡ ಸೇರಿಸಬಹುದು.