ಬೆಳಗ್ಗೆ ಏನು ತಿನ್ಬೇಕು ಅನ್ನೋ ಪ್ರಶ್ನೆ ಮನೆಮಂದಿಯಲ್ಲಿ ಪ್ರತಿದಿನವೂ ಬರೋದು ಸಾಮಾನ್ಯ. ವಿಶಿಷ್ಟವಾದದ್ದೂ, ಆರೋಗ್ಯಪೂರ್ಣವೂ ಆಗಿರುವ ತಿಂಡಿಯನ್ನು ಮಾಡೋದು ಒಂದು ದೊಡ್ಡ ಕಷ್ಟ. ಹಾಗೆಯೇ ಎಲ್ಲರಿಗೂ ಇಷ್ಟವಾಗೋ ಹಾಗೆ ಏನಾದ್ರು ತಿಂಡಿ ಮಾಡಬೇಕು ಅಂದ್ರೆ ಈ ಬಾಳೆಕಾಯಿ ದೋಸೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು
ದೋಸೆ ಅಕ್ಕಿ – 1 ಕಪ್
ಬಾಳೆಕಾಯಿ – 2
ತೆಂಗಿನ ತುರಿ – ಕಾಲು ಕಪ್
ಹಸಿರು ಮೆಣಸಿನಕಾಯಿ – 2
ಜೀರಿಗೆ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಂತೆ
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 3-4 ಗಂಟೆಗಳ ಕಾಲ ಅಥವಾ ರಾತ್ರಿ ನೆನೆಸಿಡಬೇಕು. ಬಾಳೆಕಾಯಿಯ ಸಿಪ್ಪೆ ತೆಗೆದು ದೊಡ್ಡ ತುಂಡುಗಳಾಗಿ ಕತ್ತರಿಸಿ ನೀರಿನಲ್ಲಿ ಇಡಬೇಕು.
ನಂತರ ಮಿಕ್ಸರ್ ಜಾರ್‌ಲ್ಲಿ ನೆನೆಸಿದ ಅಕ್ಕಿ, ಕತ್ತರಿಸಿದ ಬಾಳೆಕಾಯಿ, ಹಸಿಮೆಣಸು, ಜೀರಿಗೆ, ತೆಂಗಿನ ತುರಿ, ಉಪ್ಪು ಸೇರಿಸಿ ನಯವಾಗಿ ರುಬ್ಬಿಕೊಳ್ಳಬೇಕು. ಈ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ.
ಈಗ ತವಾ ಬಿಸಿ ಮಾಡಿ, ಹಿಟ್ಟು ಹಾಕಿ ದೋಸೆ ಹರಡಿ. ದೋಸೆಯ ಸುತ್ತಲೂ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ 1-2 ನಿಮಿಷ ಮುಚ್ಚಿ ಬೇಯಿಸಿದರೆ ಬಾಳೆಕಾಯಿ ದೋಸೆ ರೆಡಿ. ಈ ದೋಸೆಯನ್ನು ತಿರುವುವ ಅಗತ್ಯವಿಲ್ಲ.