FOOD | ಸಿಹಿಕುಂಬಳಕಾಯಿ ಇಡ್ಲಿ ಮಾಡಿದ್ದೀರಾ? ಇಲ್ವಾ? ಈ ಸಲ ಒಮ್ಮೆ ಟ್ರೈ ಮಾಡಿ!

ಇಡ್ಲಿ ಎಂದರೆ ಸಾಮಾನ್ಯವಾಗಿ ಅಕ್ಕಿ, ರವೆ ಅಥವಾ ರಾಗಿಯಿಂದ ತಯಾರಿಸಿದ ತಿಂಡಿ ಎಂದು ಎಲ್ಲರಿಗೂ ಗೊತ್ತು. ಆದರೆ, ಸಿಹಿಕುಂಬಳಕಾಯಿಯಿಂದ ತಯಾರಿಸಿದ ಈ ವಿಶೇಷ ಇಡ್ಲಿ ಪೌಷ್ಟಿಕತೆಯ ಜೊತೆಗೆ ವಿಶಿಷ್ಟ ರುಚಿಯನ್ನೂ ನೀಡುತ್ತದೆ. ಇವತ್ತು ಸಿಹಿಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಸಾಮಾಗ್ರಿಗಳು:

ತುರಿದ ಸಿಹಿಕುಂಬಳಕಾಯಿ- 1 ಕಪ್
ತುರಿದ ತೆಂಗಿನಕಾಯಿ – 1/2 ಕಪ್
ಬೆಲ್ಲ (ರುಚಿಗೆ ತಕ್ಕಷ್ಟು) – 1/4 ಕಪ್
ಇಡ್ಲಿ ರವೆ ಅಥವಾ ಅಕ್ಕಿ ರವೆ – 1/2 ಕಪ್
ಏಲಕ್ಕಿ – 1
ಎಣ್ಣೆ -2-3 ಚಮಚ

ಮಾಡುವ ವಿಧಾನ:

ಮೊದಲಿಗೆ ಮಿಕ್ಸಿ ಜಾರಿಗೆ ತೆಂಗಿನ ತುರಿ, ಏಲಕ್ಕಿ ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಪುಡಿ ಮಾಡಿ. ನಂತರ ಈ ಮಿಶ್ರಣವನ್ನು ಒಂದು ದೊಡ್ಡ ಬಟ್ಟಲಿಗೆ ಹಾಕಿ. ಅದಕ್ಕೆ ತುರಿದ ಸಿಹಿಕುಂಬಳಕಾಯಿ, ಇಡ್ಲಿ ರವೆ ಸೇರಿಸಿ ಸ್ವಲ್ಪ ನೀರಿನಿಂದ ಮೃದುವಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು 5 ನಿಮಿಷ ಹಾಗೆ ಇಡಿ.

ಈಗ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ತಯಾರಾದ ಮಿಶ್ರಣವನ್ನು ಆಕಾರದಲ್ಲಿ ಹಾಕಿ. ಇದನ್ನು 12-13 ನಿಮಿಷಗಳವರೆಗೆ ಬೇಯಿಸಿ. ತಯಾರಾದ ಬಿಸಿ ಬಿಸಿ ಸಿಹಿಕುಂಬಳಕಾಯಿ ಇಡ್ಲಿಯನ್ನು ತುಪ್ಪ ಅಥವಾ ಜೇನುತುಪ್ಪದ ಜೊತೆ ಸವಿಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!