ಉದ್ದಿನ ದೋಸೆ ಬಿಟ್ಟು ಹೊಸ ದೋಸೆ ರುಚಿ ಹುಡುಕುತ್ತಿದ್ದೀರಾ? ಹಾಗಿದ್ರೆ ಈ ಬಾರಿಯು ತೆಂಗಿನಕಾಯಿ ದೋಸೆಗೆ ಒಮ್ಮೆ ಟ್ರೈ ಮಾಡಿ. ಬಾಯಿಗೆ ರುಚಿ ನೀಡುವ ಈ ದೋಸೆ, ಎಲ್ಲರಿಗು ಇಷ್ಟವಾಗೋದು ಖಂಡಿತ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ- 1ಕಪ್
ಮೆಂತ್ಯೆ- 2 ಚಮಚ
ತೆಂಗಿನಕಾಯಿ – 1 ಕಪ್
ಅವಲಕ್ಕಿ – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಅಕ್ಕಿ ಹಾಗೂ ಮೆಂತ್ಯೆ ಮಿಶ್ರಣವನ್ನು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಇದನ್ನು ತೆಂಗಿನ ತುರಿ ಹಾಗೂ ಸ್ವಲ್ಪ ಅವಲಕ್ಕಿಯೊಂದಿಗೆ ಮಿಕ್ಸಿಯಲ್ಲಿ ನೀರು ಸೇರಿಸಿ ನಯವಾಗಿ ರುಬ್ಬಬೇಕು. ಈ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಎಂಟು ಗಂಟೆಗಳ ಕಾಲ ಮುಚ್ಚಿಟ್ಟು ಇಡಬೇಕು. (ರಾತ್ರಿ ರುಬ್ಬಿಸಿಕೊಂಡು ಬೆಳಿಗ್ಗೆ ಉಪಯೋಗಿಸಿದರೆ ಉತ್ತಮ.)
ಹಿಟ್ಟಿಗೆ ಉಪ್ಪು ಸೇರಿಸಿ, ತವಾ ಬಿಸಿಯಾದ ಬಳಿಕ ಹಿಟ್ಟನ್ನು ತವಾ ಮೇಲೆ ಸುರಿದು, ಮೆಲ್ಲಗೆ ಸುತ್ತಿ ಹಾಕಿ ಎರಡು ಕಡೆ ಚನ್ನಾಗಿ ಬೇಯಿಸಿ ತೆಗೆದುಕೊಳ್ಳಬೇಕು. ಬಿಸಿ ಬಿಸಿ ದೋಸೆಗೆ ತುಪ್ಪ ಅಥವಾ ಬೆಣ್ಣೆ ಜೊತೆಗೆ ಕೊಟ್ಟರೆ ಇನ್ನೂ ರುಚಿ.