ಮಂಗಳೂರು ಬನ್ಸ್ ಹೆಸರೇ ಹೇಳುವಂತೆ ಮಂಗಳೂರಿನ ಪ್ರಸಿದ್ಧವಾದ ತಿಂಡಿ. ಹೊರಗಿನಿಂದ ಸ್ವಲ್ಪ ಕ್ರಂಚಿಯಾಗಿ ಮತ್ತು ಒಳಗಿನಿಂದ ಮೆತ್ತಗಿರೋ ತಿಂಡಿ. ಒಮ್ಮೆ ತಿಂದ್ರೆ ಮತ್ತೊಮ್ಮೆ ಬೇಕು ಅನಿಸುತ್ತೆ. ಇದನ್ನ ಬೆಳಗಿನ ತಿಂಡಿಯಾಗಿಯೂ ಅಥವಾ ಸಂಜೆ ಸ್ನ್ಯಾಕ್ ಅಗಿನೂ ತಿನ್ನಬಹುದು.
ಇವತ್ತು ಮಂಗಳೂರು ಸ್ಪೆಷಲ್ ರೆಸಿಪಿ ಬನ್ಸ್ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಹಣ್ಣಾದ ಬಾಳೆ ಹಣ್ಣು – 2
ಗೋಧಿ ಹಿಟ್ಟು – 2 ಕಪ್
ಸಕ್ಕರೆ – ¼ ಕಪ್
ಎಲಕ್ಕಿ ಪುಡಿ – ½ ಟೀಚಮಚ
ತುಪ್ಪ ಅಥವಾ ಎಣ್ಣೆ – 1 ಟೇಬಲ್ ಸ್ಪೂನ್
ಉಪ್ಪು – ½ ಟೀಚಮಚ
ಮೊಸರು – 2 ಟೇಬಲ್ ಸ್ಪೂನ್
ಬೇಕಿಂಗ್ ಸೋಡಾ – ¼ ಟೀಚಮಚ
ತುಪ್ಪ ಅಥವಾ ಎಣ್ಣೆ – ಕರಿಯಲು
ತಯಾರಿಸುವ ವಿಧಾನ:
ಮೊದಲು ಚನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಸಕ್ಕರೆ, ಉಪ್ಪು, ಎಲಕ್ಕಿ ಪುಡಿ, ಮೊಸರು, ಮತ್ತು ತುಪ್ಪ ಅಥವಾ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಬೇಕಿಂಗ್ ಸೋಡಾ ಮತ್ತು ಗೋಧಿ ಹಿಟ್ಟು ಹಾಕಿ, ಹಿಸುಕಿ ಕಲಸಿ, ನಯವಾದ ಹಿಟ್ಟನ್ನು ತಯಾರಿಸಿ.
ಈ ಮಿಶ್ರಣವನ್ನು ಕನಿಷ್ಠ 6-8 ಗಂಟೆಗಳ ಕಾಲ ಮುಚ್ಚಿ ಇಡಬೇಕು. ನಂತರ ಈ ಹಿಟ್ಟಿನ ಪುಟ್ಟ ಪುಟ್ಟ ಉಂಡೆಗಳನ್ನು ಮಾಡಿ ಪೂರಿ ಲಟ್ಟಿಸುವಂತೆ ಸ್ವಲ್ಪ ದಪ್ಪ ದಪ್ಪವಾಗಿ ಲಟ್ಟಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿದರೆ ಬಿಸಿ ಬಿಸಿಯಾದ ಬನ್ಸ್ ರೆಡಿ.
ಮಂಗಳೂರು ಸೈಡ್ ಈ ಬನ್ಸ್ ಗಳನ್ನ ಸಾಂಬಾರ್ ಅಥವಾ ಚಟ್ನಿ ಜೊತೆ ಸವಿಯಲು ಕೊಡುತ್ತಾರೆ.
ಇದನ್ನ ಒಮ್ಮೆ ನೀವು ಟ್ರೈ ಮಾಡಿ, ನಿಜವಾಗಿಯೂ ಮಂಗಳೂರು ಸ್ಪೆಷಲ್ ರುಚಿ ಅನಿಸುವುದು ಖಂಡಿತ!