ನಮ್ಮ ದೈನಂದಿನ ಆಹಾರದಲ್ಲಿ ಪ್ರೊಬಯೋಟಿಕ್ಸ್ ತುಂಬಾ ಮಹತ್ವದ್ದಾಗಿದೆ. ಇದು ನಮ್ಮ ಅಜೀರ್ಣತೆಯನ್ನು ಸುಧಾರಿಸುವುದರ ಜೊತೆಗೆ ಜೀರ್ಣ ಕ್ರಿಯೆಯನ್ನು ಸಮತೋಲನಗೊಳಿಸುತ್ತದೆ. ಮನೆಯಲ್ಲಿಯೇ ತಯಾರಿಸಬಹುದಾದ ಪ್ರೊಬಯೋಟಿಕ್ ಯೋಗರ್ಟ್ ಆರೋಗ್ಯಕರ ಮಾತ್ರವಲ್ಲ, ರುಚಿಕರವೂ ಕೂಡ.
ಬೇಕಾಗುವ ಸಾಮಗ್ರಿಗಳು
250 ಮಿ.ಲೀ ಹಂಗ್ ಕರ್ಡ್ (ತೇವಾಂಶ ರಹಿತ ಗಟ್ಟಿ ಮೊಸರು)
200 ಮಿ.ಲೀ. ಫ್ರೆಶ್ ಕ್ರೀಂ,
250 ಮಿ.ಲೀ. ಕಂಡೆನ್ಸ್ ಮಿಲ್ಕ್,
100 ಗ್ರಾಂ ಮಾಗಿದ ಮಾವಿನ ತಿರುಳು,
100 ಮಿ.ಲೀ. ಪ್ರೊಬಯೋಟಿಕ್ ಮಿಲ್ಕ್
ಮಾಡುವ ವಿಧಾನ
ಒಂದು ಬಟ್ಟಲಿಗೆ ಗಟ್ಟಿ ಮೊಸರು, ಕಂಡೆನ್ಸ್ ಮಿಲ್ಕ್, ಕ್ರೀಂ, ಪ್ರೊಬಯೋಟಿಕ್ ಮಿಲ್ಕ್ ಬೆರೆಸಿಕೊಂಡು ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಚೆನ್ನಾಗಿ ಕಿವುಚಿದ ಮಾವು ಸೇರಿಸಿ.
ನಂತರ ಇದನ್ನು ಸಣ್ಣ ಬೌಲ್ ಗಳಲ್ಲಿ ಹಾಕಿ, ಓವನ್ ನಲ್ಲಿ ಹಾಟ್ ವಾಟರ್ ಪ್ಯಾನಿನಲ್ಲಿರಿಸಿ, 15 ನಿಮಿಷ ಬೇಕ್ ಮಾಡಿದರೆ, ಆರೋಗ್ಯಕರ ಹಾಗೂ ರುಚಿಕರ ಪ್ರೊಬಯೋಟಿಕ್ ಯೋಗರ್ಟ್ ರೆಡಿ.