ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಷ್ಟೋ ಜನರಿಗೆ ಚಿಕನ್ ಅಂದ್ರೆ ಪಂಚಪ್ರಾಣ, ದಿನ ಪೂರ್ತಿ ಅಂಥವರಿಗೆ ಚಿಕನ್ ಫುಡ್ ಮಾಡಿಕೊಟ್ಟರೆ ತಿನ್ನಲು ಬಯಸುತ್ತಾರೆ. ಅಂಥವರಿಗೆ ಸ್ಪೆಷಲ್ ಜಿಂಜರ್ ಚಿಕನ್ ಮಾಡೋದು ಹೇಗೆ ಅಂತ ನೋಡೋಣ…
ಬೇಕಾದ ಪದಾರ್ಥಗಳು:
ಬೋನ್ ಲೆಸ್ ಚಿಕನ್ – ಅರ್ಧ ಕೆಜಿ
ಮೆಣಸಿನ ಪುಡಿ –ಒಂದು ಚಮಚ
ಶುಂಠಿ -ಬೆಳ್ಳುಳ್ಳಿ ಪೇಸ್ಟ್
ಕಾರ್ನ್‌ಫ್ಲವರ್ –ಒಂದು ಚಮಚ
ಮೈದಾ ಹಿಟ್ಟು –ಎರಡು ಚಮಚ
ಈರುಳ್ಳಿ-2
ಹಸಿ ಮೆಣಸಿನಕಾಯಿ-4
ಬೆಳ್ಳುಳ್ಳಿ, ಶುಂಠಿ ಪೇಸ್ಟ್- ಒಂದು ಚಮಚ
ಮೊಟ್ಟೆ- ಒಂದು
ಸೋಯಾ ಸಾಸ್- ಒಂದು 1-2 ಚಮಚ
ವೆನಿಗರ್ –ಒಂದು ಚಮಚ
ಟೊಮೊಟೊ ಸಾಸ್ –2-4 ಚಮಚ
ಸಿಜ್ವನ್ ಸಾಸ್ -ಒಂದು ಕಪ್
ಖಾರದಪುಡಿ –ಅರ್ಧ ಚಮಚ
ಉಪ್ಪು- ರುಚಿಗೆ
ಜಿಂಜರ್ ಚಿಕನ್ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿಅರ್ಧ ಕೆಜಿ ಚಿಕನ್, ರೆಡ್ ಚಿಲ್ಲಿ ಪೌಡರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾರ್ನ್ ಫ್ಲವರ್, ಮೈದಾ ಹಿಟ್ಟು ಮತ್ತು ಮೊಟ್ಟೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷ ನೆನೆಯಲು ಬಿಡಿ.
ನಂತರ ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನೆನೆಸಿಟ್ಟಿದ್ದ ಚಿಕನ್ ಸೇರಿಸಿ ಫ್ರೈ ಮಾಡಿ.
ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸು ಸೇರಿಸಿ. ಸೋಯಾ ಸಾಸ್, ವಿನೆಗರ್, ಟೊಮೆಟೊ ಸಾಸ್, ಉಪ್ಪು ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಹುರಿದ ಚಿಕನ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ 10-15 ನಿಮಿಷಗಳ ಕಾಲ ಫ್ರೈ ಮಾಡಿ. ಅಂತಿಮವಾಗಿ ಅದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ಬೌಲ್ ಗೆ ಹಾಕಿ ಮನೆಮಂದಿ ಜೊತೆ ಕೂತು ಸವಿಯಿರಿ.