ಹುರುಳಿಕಾಳು ದೋಸೆ ಇದೊಂದು ಪೌಷ್ಟಿಕತೆಯ ಖಜಾನೆ ಎನ್ನಬಹುದು. ವಿಶೇಷವಾಗಿ ತೂಕ ಇಳಿಸುವವರು ಅಥವಾ ಡಯಬೆಟಿಸ್ ಇರುವವರು ಇದನ್ನು ನಿಯಮಿತವಾಗಿ ಸೇವಿಸಿದರೆ ಬಹಳ ಉಪಯೋಗವಾಗುತ್ತದೆ. ಬೆಳಗಿನ ಉಪಹಾರಕ್ಕೂ ಅಥವಾ ಸಂಜೆ ಸ್ನ್ಯಾಕ್‌ಗೂ ಇದು ಪರ್ಫೆಕ್ಟ್ ಆಯ್ಕೆ!
ಬೇಕಾಗುವ ಪದಾರ್ಥಗಳು:
ಅಕ್ಕಿ – 2 ಕಪ್ (ಇಡ್ಲಿ ಅಕ್ಕಿ)
ಹುರುಳಿಕಾಳು- ½ ಕಪ್
ಮೆಂತ್ಯ ಬೀಜಗಳು- 1 ಚಮಚ
ಬೇಯಿಸಿದ ಅನ್ನ/ಅವಲಕ್ಕಿ- ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಮೊದಲಿಗೆ ಅಕ್ಕಿ, ಹುರುಳಿಕಾಳು,ಮೆಂತ್ಯ ಬೀಜ,,ಬೇಯಿಸಿದ ಅನ್ನ/ಅವಲಕ್ಕಿಯನ್ನು ಸುಮಾರು 8 ಗಂಟೆಗಳ ಕಾಲ ನೆನೆಸಿ, ಚೆನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಂಡು ರಾತ್ರಿಯಿಡೀ ಹುದುಗಿಸಿ.
ಮರುದಿನ ಬೆಳಿಗ್ಗೆ, ಹುದುಗಿಸಿದ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ. ಈಗ ಬಿಸಿಯಾದ ತವಾ ಮೇಲೆ ದೋಸೆ ಹರಡಿ ಸ್ವಲ್ಪ ಬೆಂದ ಮೇಲೆ ಬೇಕಿದ್ದರೆ ತುಪ್ಪ ಹಾಕಿ ನಿಮಗೆ ಇಷ್ಟವಾದ ಚಟ್ನಿಯೊಂದಿಗೆ ಸವಿಯಿರಿ.