ಕ್ಯಾರೆಟ್ ಮಿಲ್ಕ್‌ಶೇಕ್ ಒಂದು ಆರೋಗ್ಯಕರ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಪಾನೀಯ. ಇದು ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಸೇವಿಸಲು ಬಹಳ ಸೂಕ್ತವಾಗಿದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ A ಮತ್ತು ಹಾಲಿನಲ್ಲಿ ಇರುವ ಪ್ರೋಟೀನ್ ಒಟ್ಟಿಗೆ ಆರೋಗ್ಯಕ್ಕೆ ತುಂಬಾ ಲಾಭಕರ. ಈ ಶೇಕ್ ತಯಾರಿಸಲು ಸರಳವಾದ ಪದಾರ್ಥಗಳು ಮಾತ್ರ ಬೇಕು.
ಬೇಕಾಗುವ ಪದಾರ್ಥಗಳು:
ಕ್ಯಾರೆಟ್ – 2 (ಮಧ್ಯಮ ಗಾತ್ರ)
ಹಾಲು – 1 ಕಪ್
ಸಕ್ಕರೆ – 2 ರಿಂದ 3 ಟೇಬಲ್ ಸ್ಪೂನ್
ಐಸ್ ಕ್ಯೂಬ್‌ಗಳು – 4 ರಿಂದ 5
ಏಲಕ್ಕಿ ಪುಡಿ – 1/4 ಟೀ ಸ್ಪೂನ್
ಜಾಯಿಕಾಯಿ ಪುಡಿ – ಒಂದು ಚಿಟಿಕೆ
ತಯಾರಿಸುವ ವಿಧಾನ:
ಕ್ಯಾರೆಟ್‌ಗಳನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸರ್ ಜಾರ್‌ನಲ್ಲಿ ಹಾಕಿ. ಅದಕ್ಕೆ ಹಾಲು, ಸಕ್ಕರೆ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಜೊತೆಗೆ ಐಸ್ ಕ್ಯೂಬ್‌ಗಳನ್ನು ಹಾಕಿ, ಮೃದುವಾಗಿ ಬ್ಲೆಂಡ್ ಮಾಡಿ.
ಶೇಕ್‌ನ ಗಟ್ಟಿಯಾಗಿದೆ ಎಂದು ಅನಿಸಿದರೆ ಇನ್ನಷ್ಟು ಹಾಲು ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿದರೆ ಕ್ಯಾರೆಟ್ ಮಿಲ್ಕ್‌ಶೇಕ್ ರೆಡಿ.